ಮಂಜೇಶ್ವರ: ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ದಿನವನ್ನು ಬುಧವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪುಸ್ತಕ ಪ್ರದರ್ಶನ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮಾ ಅವರು ಪಿ. ಎನ್. ಪಣಿಕ್ಕರ್ ರವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸುವುದರೊಂದಿಗೆ ಮಕ್ಕಳಿಗೆ ಕೆಲವು ಪುಸ್ತಕಗಳ ಪರಿಚಯ ಮಾಡಿಸಿದರು. ಆ ಮೂಲಕ ಪಿ. ಎನ್. ಪಣಿಕ್ಕರ್ ರವರ ಸಂಸ್ಮರಣಾ ದಿನವನ್ನು ವಾಚನಾ ದಿನವಾಗಿ ಆಚರಿಸುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಪ್ರಚೋದನೆ ನೀಡಲಾಯಿತು. ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ, ಶಿಕ್ಷಕಿಯರಾದ ಸೌಮ್ಯ ಪಿ, ಅಶ್ವಿನಿ ಎಲಿಯಾಣ, ರಮೀಝ ಉಪಸ್ಥಿತರಿದ್ದು ಸಹಕರಿಸಿದರು.