ಮುಳ್ಳೇರಿಯ: ಮುಳಿಯಾರು ಶ್ರೀಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ದ್ರವ್ಯಕಲಶ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಪ್ರಸಿದ್ಧ ಬಾಲಗಾಯಕಿ ಕು ಸೂರ್ಯಗಾಯತ್ರಿ ಮತ್ತು ಬಳಗ ವಡಗರ ಇವರಿಂದ ಸೂರ್ಯಸಂಗೀತ ಎಂಬ ಭಕ್ತಿಗಾನ ಉಪಾಸನಾ ಕಛೇರಿಯು ಇತ್ತೀಚೆಗೆ ಸಂಪನ್ನವಾಯಿತು.
ವಯಲಿನ್ ನಲ್ಲಿ ಗಣರಾಜ ಕಾರ್ಲೆ ಸಹಕರಿಸಿದರು. ಸೂರ್ಯಗಾಯತ್ರಿಯವರ ತಂದೆ ಪಿ.ವಿ. ಅನಿಲ್ ಕುಮಾರ್ ಮೃದಂಗವಾದನದಲ್ಲಿ ಭಾಗವಹಿಸಿದ್ದರು. ಪ್ರಶಾಂತ್ ನಿಟ್ಟೂರು ತಬಲಾ ಮತ್ತು ಶೈಲೇಶ್ ಎಕ್ಸ್ಟ್ರಾ ಪಾಕ್ರ್ಯೂಷನ್ ವಾದನದಲ್ಲಿ ಸಹ ಕಲಾವಿದರಾಗಿ ಕಛೇರಿಯನ್ನು ಶ್ರೇಷ್ಟ ಮಟ್ಟಕ್ಕೆ ಪ್ರಸ್ತುತಪಡಿಸಿದರು. ಸೀತಾರಾಮ ಬಳ್ಳುಳ್ಳಾಯ ಕಲಾವಿದರಿಗೆ ಸ್ಮರಣಿಕೆ, ಪ್ರಸಾದ ನೀಡಿ ಗೌರವಿಸಿದರು. ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.