ಮಂಜೇಶ್ವರ: ರಾಜ್ಯ ಗ್ರಂಥಾಲಯ ಪಿತಾಮಹ ಪಿ.ಎನ್ ಪಣಿಕ್ಕರ್‍ರವರ ಸ್ಮರಣಾರ್ಥ ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಾಚನಾ ಸಪ್ತಾಹ ಬುಧವಾರ ಆರಂಭಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಶಾಲಾ ಅಸೆಂಬ್ಲಿಯಲ್ಲಿ ಮುಖ್ಯೊಪಾಧ್ಯಾಯ ಗೋಪಾಲಕೃಷ್ಣ ಭಟ್ ಇವರು ಪಿ.ಎನ್ ಪಣಿಕ್ಕರ್‍ರವರನ್ನು ಸ್ಮರಿಸಿ ಓದಿನ ಮಹತ್ವದ ಅರಿವನ್ನು ಮೂಡಿಸಿದರು. ಬಳಿಕ ವಿದ್ಯಾರ್ಥಿಗಳಾದ ಎಲ್ನಾ ಕ್ರಿಸ್ಟಿನ ಟಿ.ಜೆ ಹಾಗೂ ಕೆ.ಕಿಶೋರ್ ಇವರು ಪಿ.ಎನ್ ಪಣಿಕ್ಕರ್‍ರವರ ಜೀವನ ಮತ್ತು ಸಾಧನೆಯನ್ನು ಮೆಲುಕು ಹಾಕಿದರು. ಕಾರ್ಯಕ್ರಮದ ಅಂಗವಾಗಿ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಯಿತು. ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು.