ಮಂಜೇಶ್ವರ: ಶಾಲಾ ಪ್ರವೇಶೋತ್ಸವದ ಅಂಗವಾಗಿ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಪಂಚಾಯತಿ ವ್ಯಾಪ್ತಿಯ ಏಳು ವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳಾದ ಪುಸ್ತಕ, ಕೊಡೆ, ಬ್ಯಾಗ್ ಇತ್ಯಾದಿಗಳನ್ನು ಆಯಾಯ ಸ್ಕೂಲ್‍ಗಳಲ್ಲಿ ನಡೆದ ಕಾರ್ಯಕ್ರಮದ ಮೂಲಕ ವಿತರಿಸಲಾಯಿತು.
ಪಾವೂರು ವಿದ್ಯೋದಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ಅಧ್ಯಕ್ಷ ಬಿ.ವಿ.ರಾಜನ್, ಹೊಸಬೆಟ್ಟು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ದೇಶಕ ಗಣೇಶ್ ಕುಮಾರ್, ಹೊಸಬೆಟ್ಟು ಜಿಡಬ್ಲ್ಯು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ದೇಶಕಿ ರೇಖಾ ಕೀರ್ತೇಶ್ವರ, ಉದ್ಯಾವರ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಬಿ.ಎಂ.ಅನಂತ, ಜಿಎಲ್‍ಪಿಎಸ್ ಬಡಾಜೆಯಲ್ಲಿ ನಿರ್ದೇಶಕ ಎಸ್.ರಾಮಚಂದ್ರ, ಯತೀಶ್ ಅರಿಮಲೆ ಮತ್ತು ವಿವಿಧ ಶಾಖಾ ಪ್ರಬಂಧಕರು ಗಳಾದ ಬಿ.ಸುಕುಮಾರನ್, ಕಾರ್ಯದರ್ಶಿ ರಾಜನ್ ನಾಯರ್, ಚಂದ್ರಶೇಖರ್ ಮೀಯಪದವು, ಶಿವಪ್ರಸಾದ್, ಎ.ಆರ್.ಮುರಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಉದ್ಯಾವರ ತೋಟ ಜಿಎಂಎಲ್‍ಪಿಎಸ್, ಜಿಎಲ್‍ಪಿಎಸ್ ಉದ್ಯಾವರ ಮಾಡ ಶಾಲೆಗಳಲ್ಲಿ ವಿತರಣೆ ಜೂನ್ 10 ರಂದು ನಡೆಯುವುದು.