ಕಾಸರಗೋಡು: ಬದಿಯಡ್ಕ ಪ್ರೀಮೆಟ್ರಿಕ್ ಹಾಸ್ಟೆಲ್‍ನಲ್ಲಿದ್ದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾಸರಗೋಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಹಾಸ್ಟೆಲ್ ಇದಾಗಿದ್ದು, ಸಂಸ್ಥೆಯ ಸಲಹಾ ಸಮಿತಿ ಸಭೆಯೂ ಜರಗಿತು.
ಬ್ಲಾಕ್ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಕುಂಞÂ ಚಾಯಿಂಡಡಿ ಅಭಿನಂದನೆ ನಡೆಸಿದರು. ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಎಸ್.ಅಹಮ್ಮದ್. ಎಸ್.ಸಿ.ಡಿ.ಒ. ಬಶೀರ್ ಪಿ.ಬಿ., ವಾರ್ಡನ್ ವಿನೀಷ್ ವಿ.ನಾಯರ್, ರಾಜೇಶ್ ಮಾಸ್ತರ್ ಮೊದಲದವರು ಉಪಸ್ಥಿತರಿದ್ದರು.