ಉಪ್ಪಳ: ಗ್ರಾಮ ವಿಕಾಸ ಸಮಿತಿ ಹಾಗೂ ಶ್ರೀ ಗೌರೀ ಗಣೇಶ ಭಜನಾ ಮಂದಿರ ಪ್ರತಾಪನಗರ ಇದರ ಜಂಟಿ ಆಶ್ರಯದಲ್ಲಿ ಪರಿಸರ ದಿನಾಚರಣೆಯು ಬುಧವಾರ ಮಂದಿರದ ವಠಾರದಲ್ಲಿ ನಡೆಯಿತು.
ಗಣೇಶೋತ್ಸವ ಉತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ.ಯಂ. ಸ್ಥಳೀಯರಿಗೆ ಸಸಿ ನೀಡುವ ಮೂಲಕ ಉದ್ಘಾಟಿಸಿದರು. ಮಂದಿರದ ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪರಿಸರ ದಿನದ ಬಗ್ಗೆ ಮಾತನಾಡಿದರು. ದೇವದಾಸ.ಸಿ, ಮಧು ಮಾಸ್ತರ್, ಓಂಪ್ರಕಾಶ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಮಂದಿರದ ಪರಿಸರದಲ್ಲಿ ಮಕ್ಕಳು ಗಿಡಗಳನ್ನು ನೆಟ್ಟರು.