ಕಾಸರಗೋಡು: ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ವಿಶ್ವ ಆಹಾರ ಸುರಕ್ಷೆ ದಿನಾಚರಣೆ ಜರುಗಿತು.
ಕಾರ್ಯಕ್ರಮ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಒಂದು ದಿನದ ವಿಚಾರ ಸಂಕಿರಣ ಜರುಗಿತು. ಜಿಲ್ಲಾ ಮಟ್ಟದ ಐ.ಸಿ.ಡಿ.ಎಸ್. ಘಟಕದ ವತಿಯಿಂದ ಸಮಾರಂಭ ಜರುಗಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ಡೀನಾ ಭರತನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಭಾರ ಕಾರ್ಯಕ್ರಮ ಅಧಿಕಾರಿ ಕವಿತಾ ರಾಣಿ ರಂಜಿತ್, ಮಹಿಳಾ ಸಂರಕ್ಷಣೆ ಅಧಿಕಾರಿ ಎ.ಎಸ್.ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು.
ಅಂಗನವಾಡಿ ಪೋಷಕಾಹಾರಗಳಿಗೆ ಸಂಬಂಧಪಟ್ಟು ಆಹಾರ ಸುರಕ್ಷೆ ಕಾನೂನುಗಳು, ಅಂಗನವಾಡಿಗಳಲ್ಲಿ ಜೈವಿಕ ತರಕಾರಿ ಬೆಳೆಯುವ ಇತ್ಯಾದಿ ವಿಷಯಗಳಲ್ಲಿ ಮಂಜೇಶ್ವರ ವಲಯ ಆಹಾರ ಸುರಕ್ಷೆ ಅಧಿಕಾರಿ ಪಿ.ವಿ.ಆಝಾದ್, ಕಾ?ಂಗಾಡ್ ವಲಯ ಆಹಾರ ಸುರಕ್ಷೆ ಅಧಿಕಾರಿ ಡಾ.ಆನ್ ಷಾ ಜೋನ್, ಹಿರಿಯ ಕೃಷಿ ಸಹಾಯಕ ಪಿ.ಡಿ.ದಾಸ್ ಮೊದಲಾದವರು ತರಗತಿ ನಡೆಸಿದರು.
ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು, ಐ.ಸಿ.ಡಿ.ಎಸ್. ಮೇಲ್ವಿಚಾರಕರು ಮೊದಲಾದವರು ಉಪಸ್ಥಿತರಿದ್ದರು.