ಕಾಸರಗೋಡು: ಬಾಲ ಕಾರ್ಮಿಕತನ ವಿರೋ„ ದಿನಾಚರಣೆಯ ಜಿಲ್ಲಾ ಮಟ್ಟದ ಸಮಾರಂಭ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿತು.
2019ರ ವಿಶ್ವ ಬಾಲಕಾರ್ಮಿಕ ವಿರುದ್ಧ ದಿನ ಮುಂದಿಡಲಾಗುತ್ತಿದೆ ಎಂಬ ಸಂದೇಶದೊಂದಿಗೆ ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಜಾರಿಗೊಳಿಸುವ ಶರಣಬಾಲ್ಯಂ ಯೋಜನೆಯ ಅಂಗವಾಗಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ವಿಶ್ವ ಬಾಲಕಾರ್ಮಿಕ ದಿನಾಚರಣೆ ನಡೆಯಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಮಹಿಳಾ ಆಯೋಗ ಸದಸ್ಯೆಯರಾದ ಡಾ.ಷಾಹಿದಾ ಕಮಾಲ್, ಇ.ಎಂ.ರಾಧಾ ಮುಖ್ಯ ಅತಿಥಿಯಾಗಿದ್ದರು. ಚೈಲ್ಡ್ ವೆಲ್ಪೇರ್ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಪಿ.ಪಿ.ಶ್ಯಾಮಲಾದೇವಿ ಬಾಲಕಾರ್ಮಿಕತನ ವಿರುದ್ಧ ಪ್ರತಿಜ್ಞೆ ನಡೆಸಿಕೊಟ್ಟರು.
ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಪಿ.ಬಿಜು, ಚೈಲ್ಡ್ ರೆಸ್ಕ್ಯೂ ಅಧಿಕಾರಿ ಬಿ.ಅಶ್ವಿನ್, ಐ.ಸಿ.ಡಿ.ಎಸ್. ಸೆಲ್ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್, ಸಹಾಯಕ ಕಾರ್ಮಿಕ ಅಧಿಕಾರಿ ಸುಜಿತ್ ಲಾಲ್, ಕಾಸರಗೋಡು ಸರಕಾರಿ ಕಾಲೇಜು ಎನ್.ಎಸ್.ಎಸ್.ಕಾರ್ಯದರ್ಶಿ ಎಂ.ಹರಿಕೃಷ್ಣನ್, ಪೆÇ್ರೀಗ್ರಾಂ ಕೇರ್ ಟೇಕರ್ ಗೋಪಿನಾಥನ್ ನಾಯರ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಎನ್.ಎಸ್.ಎಸ್. ಸ್ವಯಂ ಸೇವಕರು, ಎನ್.ಸಿ.ಸಿ. ಕೆಡೆಟ್‍ಗಳ ಸಹಕಾರದೊಂದಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಕಾಸರಗೋಡು ಸರಕಾರಿ ಕಾಲೇಜು ವರೆಗೆ ಸಾಮೂಹಿಕ ಓಟ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹಸುರು ನಿಶಾನೆ ತೋರಿದರು. ದಿನಚರಣೆ ಅಂಗವಾಗಿ ಹೊಸದುರ್ಗ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ನಡೆಯಿತು.
(ಚಿತ್ರ ಮಾಹಿತಿ : ವಿಶ್ವ ಬಾಲಕಾರ್ಮಿಕ ದಿನಾಚರಣೆಯ ಜಿಲ್ಲಾ ಮಟ್ಟದ ಸಮಾರಂಭದಲ್ಲಿ ನ್ಯಾಯವಾದಿ ಪಿ.ಪಿ.ಶ್ಯಾಮಲಾದೇವಿ ಪ್ರತಿಜ್ಞೆ ಬೋಧಿಸುತ್ತಿರುವುದು.)