ಪೆರ್ಲ:ಕೇರಳ ಕೃಷಿ ಅಭಿವೃದ್ಧಿ, ಕೃಷಿಕರ ಕಲ್ಯಾಣ ಇಲಾಖೆ, ಎಣ್ಮಕಜೆ ಕೃಷಿಭವನ ಆಶ್ರಯದಲ್ಲಿ ಪಂಚಾಯಿತಿಯ 17 ವಾರ್ಡುಗಳಲ್ಲಿ ಕೃಷಿಕರ ಸಭೆ ನಡೆಯಲಿದೆ.
ಇಂದು (ಜೂ.28) ಬೆಳಿಗ್ಗೆ 11ಕ್ಕೆ 4ನೇ ವಾರ್ಡ್ ಕಾಟುಕುಕ್ಕೆ- ಬಿ.ಎ.ಯು.ಪಿ.ಎಸ್.ಶಾಲೆ, ಮಧ್ಯಾಹ್ನ 3.30ಕ್ಕೆ 3ನೇ ವಾರ್ಡ್ ಬಾಳೆಮೂಲೆ - ಬಾಳೆಮೂಲೆ ಶಾಲೆ, ಜೂ. 29ರಂದು ಬೆಳಗ್ಗೆ 11ಕ್ಕೆ 5ನೇ ವಾರ್ಡ್ ಶಿವಗಿರಿ - ಎಣ್ಮಕಜೆ ಪಂಚಾಯಿತಿ ಹಾಲ್, ಸಂಜೆ 3ಕ್ಕೆ 13ನೇ ವಾರ್ಡ್ ಗುಣಾಜೆ- ಪಳ್ಳಂ ಅಂಗನವಾಡಿ, ಜುಲೈ 1ರಂದು ಬೆಳಗ್ಗೆ 11ಕ್ಕೆ 7ನೇ ವಾರ್ಡ್ ವಾಣೀನಗರ - ಕುತ್ತಾಜೆ ಸಮುದಾಯ ಭವನ, ಜು.2ರಂದು ಬೆಳಗ್ಗೆ 10.30ಕ್ಕೆ 9ನೇ ವಾರ್ಡ್ ಪೆರ್ಲ ಈಸ್ಟ್ ಮತ್ತು ಮಧ್ಯಾಹ್ನ 3ಕ್ಕೆ 10ನೇ ವಾರ್ಡ್ ಪೆರ್ಲ ವೆಸ್ಟ್ - ಎಣ್ಮಕಜೆ ಪಂಚಾಯಿತಿ ಹಾಲ್, ಜು.3ರಂದು ಬೆಳಗ್ಗೆ 10.30ಕ್ಕೆ 8ನೇ ವಾರ್ಡ್ ಕಜಂಪಾಡಿ - ಕನ್ನಟಿಕಾನ ಸಮುದಾಯ ಭವನ, ಜು.4ರಂದು ಬೆಳಗ್ಗೆ 10.30ಕ್ಕೆ 12ನೇ ವಾರ್ಡ್ ಬಣ್ಪುತ್ತಡ್ಕ -ಬಣ್ಪುತ್ತಡ್ಕ ಮಹಿಳಾ ಸಮಾಜ, ಸಂಜೆ 4ಕ್ಕೆ 11ನೇ ವಾರ್ಡ್ ಬೆದ್ರಂಪಳ್ಳ - ಬೆದ್ರಂಪಳ್ಳ ಕಿರಿಯ ಪ್ರಾಥಮಿಕ ಶಾಲೆ, ಜು.5ರಂದು ಸಂಜೆ 4ಕ್ಕೆ 14ನೇ ವಾರ್ಡ್ ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆ, ಜು.6ರಂದು ಬೆಳಗ್ಗೆ 11ಕ್ಕೆ 15ನೇ ವಾರ್ಡ್ ಎಣ್ಮಕಜೆ - ಎಣ್ಮಕಜೆ ಪಂಚಾಯಿತಿ ಹಾಲ್ ಮತ್ತು 6ನೇ ವಾರ್ಡ್ ಸ್ವರ್ಗ ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಶಾಲೆ, , ಜು.8ರಂದು ಸಂಜೆ 3 ಗಂಟೆಗೆ 16ನೇ ವಾರ್ಡ್ ಬಜಕೂಡ್ಲು ಬಜಕೂಡ್ಲು ಅಂಗನವಾಡಿ ಮತ್ತು 3.30ಕ್ಕೆ 17ನೇ ವಾರ್ಡ್ ನಲ್ಕ - ನಲ್ಕ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಲಿವೆ.
ಕೃಷಿ ಇಲಾಖೆಯ ಜನಪರ ಯೋಜನೆಯಂತೆ 2019-20ನೇ ಆರ್ಥಿಕ ವರ್ಷದ ವಿವಿಧ ಯೋಜನೆಗಳ ಕುರಿತು ಕೃಷಿಕರಲ್ಲಿ ತಿಳುವಳಿಕೆ ಮೂಡಿಸಿ ಕೆಳಸ್ತರದಲ್ಲಿರುವ ಕೃಷಿ ವಲಯವನ್ನು ಮೇಲ್ ಸ್ತರಕ್ಕೇರಿಸುವ ಪ್ರಯತ್ನದ ಭಾಗವಾಗಿ ಈ ಸಭೆಗಳನ್ನು ನಡೆಸಲು ಉದ್ದೇಶಿಸಲಾಗಿದೆ.
ಸಭೆ ನಡೆಯುವ ಕೇಂದ್ರಗಳಲ್ಲಿ ಕೃಷಿಕರು ತಮ್ಮ ಜಮೀನಿನಲ್ಲಿ ಬೆಳೆಸಿದ ಕೃಷಿ ಉತ್ಪನ್ನಗಳನ್ನು ನೇರ ಹಾಗೂ ಸ್ವಂತ ಜವಾಬ್ದಾರಿಯಲ್ಲಿ ಮಾರಾಟ ನಡೆಸುವ ಹಾಗೂ ಖರೀದಿಸುವ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ಎಣ್ಮಕಜೆ ಕೃಷಿ ಅಧಿಕಾರಿ ತಿಳಿಸಿದ್ದಾರೆ.
ಕೃಷಿ ವಲಯದ ಸಮಗ್ರ ಅಭಿವೃದ್ಧಿಯ ಭಾಗವಾಗಿ ಕೃಷಿ ಅಭಿವೃದ್ಧಿ ಪದ್ದತಿಗಳಲ್ಲಿ ಕೃಷಿಕರ ಪಾಲುದಾರಿಕೆ ಬಲಪಡಿಸುವುದು ಹಾಗೂ ಕೃಷಿಕರು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಕೃಷಿಕರ ಅಭಿಪ್ರಾಯ, ಸಲಹೆಗಳನ್ನು ಕ್ರೋಢೀಕರಿಸಿ ತೀರ್ಮಾನ ಕೈಗೊಳ್ಳುವುದು, ಅಗತ್ಯ ಯೋಜನೆಗಳನ್ನು ರೂಪೀಕರಣ ಪ್ರಕ್ರಿಯೆಗೆ ವೇದಿಕೆ ಸೃಷ್ಟಿಸುವುದು ಕೃಷಿ ಸಭೆಗಳ ಪ್ರಧಾನ ಉದ್ದೇಶವಾಗಿದೆ.