ಕುಂಬಳೆ: ಮಂಜೇಶ್ವರ ಮಂಡಲಕೊಳಪಟ್ಟಿರುವ ಸಮುದ್ರ ಕಿನಾರೆಯ ಕೆಲವು ಪ್ರದೇಶಗಳಲ್ಲಿ ಕಡಲ್ಕೊರತೆಯಿಂದಾಗಿ ಹಲವರು ಮನೆ ಮತ್ತು ನಿವೇಶನಗಳನ್ನು ಕಳಕೊಂಡಿದ್ದಾರೆ. ಕುಂಡುಕೊಳಕೆ, ಕಣ್ವತೀರ್ಥ, ಶಾರದಾ ನಗರ, ಮುಸೋಡಿ, ಹನುಮಾನ್ ನಗರ, ಐಲ, ಬೇರಿಕೆ, ಶಿರಿಯ, ಕೊೈಯಿಪ್ಪಾಡಿ, ಕೊಪ್ಪಳ, ನಾಂಗಿ ಮೊದಲಾದ ಪ್ರದೇಶಗಳಲ್ಲಿ ಕಡಲ್ಕೊರೆತದಿಂದಾಗಿ ಹಾನಿ ಸಂಭವಿಸಿದೆ. ಆದರೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವ ಎಡ-ಬಲ ರಂಗಗಳು ಈ ಪ್ರದೇಶಗಳನ್ನು ಅವಗಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನಾದರೂ ಮುಖ್ಯಮಂತ್ರಿ ಮತ್ತು ಸಂಸದರು ತುರ್ತಾಗಿ ಈ ಸ್ಥಳಗಳನ್ನು ಸಂದರ್ಶಿಸಿ ಪೋಲಿಮುಟ್ಟು(ವಿಶೇಷ ತಡೆಗೋಡೆ) ಮಾದರಿಯಲ್ಲಿ ತಡೆಗೋಡೆ ನಿರ್ಮಿಸಿ ಪರಿಹರಿಸಬೇಕಾಗಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಕೆ. ಸತೀಶ್ಚಂದ್ರ ಭಂಡಾರಿ ಕೋಳಾರು ಅಗ್ರಹಿಸಿದ್ದಾರೆ.
ಕಡಲ್ಕೊರೆತ: ಮಾದರಿಯ ತಡೆಗೋಡೆ ನಿರ್ಮಿಸಬೇಕು- ಬಿಜೆಪಿ ಅಗ್ರಹ
0
ಜೂನ್ 13, 2019