ಪೆರ್ಲ:ಬೆಂಗಳೂರು ರಾಜೀವ ಗಾಂಧಿ ವಿಶ್ವ ವಿದ್ಯಾನಿಲಯದ ಆಯುರ್ವೇದ ವಿಭಾಗದ ಪರೀಕ್ಷೆಯಲ್ಲಿ ಪೆರ್ಲ ಸಮೀಪದ ದರ್ಬೆಯ ಡಾ. ರಮ್ಯಶ್ರೀ ಡಿ.ಅವರು ರ್ಯಾಂಕ್ ಗಳಿಸಿದ್ದಾರೆ.
ಪದಾರ್ಥ ವಿಜ್ಞಾನ ಮತ್ತು ಇತಿಹಾಸದಲ್ಲಿ 7ನೇ ರ್ಯಾಂಕ್, ಸಂಸ್ಕೃತದಲ್ಲಿ 5ನೇ ರ್ಯಾಂಕ್, ದ್ರವ್ಯ ಗುಣ ವಿಜ್ಞಾನದಲ್ಲಿ 4ನೇ ರ್ಯಾಂಕ್ ಹಾಗೂ ರೋಗ ವಿಧಾನದಲ್ಲಿ 2ನೇ ರ್ಯಾಂಕ್ ಗಳಿಸಿದ ಅವರಿಗೆ ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪದವಿ ಪ್ರದಾನ ಮಾಡಿದರು. ಈಕೆ ದರ್ಬೆ ರಾಮ ಭಟ್ ಮತ್ತು ಭಾಗ್ಯಲಕ್ಷ್ಮಿ ದಂಪತಿಗಳ ಪುತ್ರಿ.