ಉಪ್ಪಳ: ಐಲ ಬ್ರಹ್ಮಶ್ರೀ ಮೊಗೇರ ಮತ್ತು ಪರಿವಾರ ದೈವಗಳ ದೈವಸ್ಥಾನ ಪುಳಿಕುತ್ತಿ ಪ್ರತಾಪನಗರ ಇದರ ಜೀರ್ಣೋದ್ದಾರದ ಪೂರ್ವಾಭಾವಿ ಸಭೆ ಜೀರ್ಣೋದ್ದಾರದ ನೂತನ ಸಮಿತಿ ರಚನೆ ದೈವಸ್ಥಾನದ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ಧಾರ್ಮಿಕ ಮುಂದಾಳು ಅಶೋಕ್ ಕುಮಾರ್ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಶೇಷ ಅತಿಥಿಯಾಗಿ ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಭಾಗವಹಿಸಿದ್ದರು. ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೋಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ರಾಮಪ್ಪ ಮಂಜೇಶ್ವರ, ಬಾಬು ಪಚ್ಲಂಪಾರೆ, ಆನಂದ ಯಂ ಬಂದ್ಯೋಡು ಮೊದಲಾದ ಗಣ್ಯರು ಉಪಸ್ಥಿತರಿದ್ದರು. ದೇವದಾಸ್ ಶೆಟ್ಟಿ ತೂಮಿನಾಡು ಸ್ವಾಗತಿಸಿ, ಪುರುಷೋತ್ತಮ ಪ್ರತಾಪನಗರ ಜೀರ್ಣೋದ್ದಾರ ಕಾರ್ಯದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಸುಂದರ ಶೆಟ್ಟಿ ಕನ್ನಟಿಪಾರೆ ಪ್ರಾಸ್ತಾವಿಕ ಮಾತನಾಡಿದರು. ರಾಮಚಂದ್ರ ಬಲ್ಲಾಳ್ ವಂದಿಸಿದರು.