ಮಂಜೇಶ್ವರ: ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಕೇರಳದ ಎಡರಂಗ ಸರ್ಕಾರ ಹಾಗೂ ಇಲ್ಲಿನ ಕೆಲವು ಗ್ರಾಮ ಪಂಚಾಯತಿ ಅಡಳಿತಗಳು ಬುಡಮೇಲು ಗೊಳಿಸುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರ .ಕಾರ್ಯದರ್ಶಿ ಆದರ್ಶ್ ಬಿ.ಎಂ ಅವರು ಪಿಣರಾಯಿ ಸರ್ಕಾರದ ಹಾಗೂ ಐಕ್ಯರಂಗ ಆಡಳಿತದ ಪಂಚಾಯತಿಗಳ ಆಡಳಿತವನ್ನು ಖಂಡಿಸಿದರು.
ವರ್ಕಾಡಿ ಪಂಚಾಯತಿ ಬಿಜೆಪಿ ಪದಾಧಿಕಾರಿಗಳ ಹಾಗೂ ಬೂತ್ ನೇತಾರರ ಸಭೆಯಲ್ಲಿ ಅವರು ಮಾತನಾಡಿದರು.
ವರ್ಕಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಪಂಚಾಯತಿ ಆಡಳಿತ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಹಾಗೂ ಬಡವರಿಗೆ ವಸತಿ ನೀಡುವ ಆವಾಜ್ ಯೋಜನೆಗೆ ಸಹಕಾರ ನೀಡುತ್ತಿಲ್ಲ ಎಂದು ಬಿಜೆಪಿ ಜನಪ್ರತಿನಿಧಿಗಳು ಸಭೆಗೆ ಮಾಹಿತಿ ನೀಡಿದರು.
ವರ್ಕಾಡಿ ಗ್ರಾಮ ಪಂಚಾಯತಿ ಅಡಳಿತ ಸಮಿತಿ ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿಗೊಳಿಸದೆ ಇದ್ದಲ್ಲಿ ಪಂಚಾಯತಿ ಕಚೇರಿ ಮುತ್ತಿಗೆ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಬಿಜೆಪಿ ಪಂಚಾಯತಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಪ್ರ.ಕಾರ್ಯದರ್ಶಿ ಜಗದೀಶ್ ಚೆಂಡೆಲ್, ಮುಖಂಡರಾದ ಸದಾಶಿವ ಯು., ಆನಂದ ತಚ್ಚಿರೆ, ನಾಗೇಶ್, ಯತಿರಾಜ್ , ವಸಂತ ವರ್ಕಾಡಿ , ದೂಮಪ್ಪ ಶೆಟ್ಟಿ ತಾಮಾರ್ ಹಾಗೂ ವಿವಿಧ ಮೋರ್ಚಾಗಳ ನೇತಾರರು ಉಪಸ್ಥಿತರಿದ್ದರು. ಯೋಗೀಶ್ ದೈಗೊಳಿ ಸ್ವಾಗತಿಸಿ, ಕೃಷ್ಣಪ್ಪ ವಂದಿಸಿದರು.