HEALTH TIPS

ಅಭ್ಯಾಸದಿಂದಲೂ, ವಿದ್ಯಾಭ್ಯಾಸದಿಂದಲೂ ಸಹನಾಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು : ಎಸ್.ಎನ್.ಮಯ್ಯ

   
      ಮಧೂರು : ಸಹನೆಯನ್ನು ಜೀವನದ ಮಹತ್ವದ ಅಂಶವಾಗಿ ಪರಿಗಣಿಸಬೇಕು. ಅಭ್ಯಾಸದಿಂದಲೂ, ವಿದ್ಯಾಭ್ಯಾಸದಿಂದಲೂ ಸಹನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇನ್ನೊಬ್ಬರ ಅಭಿಪ್ರಾಯಗಳನ್ನೂ ಲಾಲಿಸುವುದರಲ್ಲಿ ಆಸಕ್ತಿಯೂ, ತಾಳ್ಮೆಯೂ ಇರಬೇಕು ಎಂದು ಕೂಟಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಅಭಿಪ್ರಾಯಪಟ್ಟರು.
       ಅವರು ಕಾಸರಗೋಡು ಅಂಗಸಂಸ್ಥೆಯ ನೇತೃತ್ವದಲ್ಲಿ ಕೊಲ್ಯ ಸಮೀಪದ ನರಸಿಂಹ ಮಯ್ಯ ಮಾಸ್ತರ್ ಅವರ ತೋಟ ಮನೆಯಲ್ಲಿ ಇತ್ತೀಚೆಗೆ ಜರಗಿದ ಸಂಪರ್ಕ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಉತ್ತಮ ಗ್ರೇಡ್‍ಗಳೊಂದಿಗೆ ತೇರ್ಗಡೆಯಾದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.
       ಕಾರ್ಯಕ್ರಮದಲ್ಲಿ ಹಿರಿಯ ಧಾರ್ಮಿಕ ಮುಂದಾಳು ವೇದಮೂರ್ತಿ ತುಂಗ ಶಂಕರನಾರಾಯಣ ಭಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ಪ್ರಾಮಾಣಿಕತೆ ಹಾಗು ಧಾರ್ಮಿಕ ನಡತೆ ಇವೆರಡು ದೊಡ್ಡಗುಣಗಳಾಗಿದ್ದು, ಇವು ಮನುಷ್ಯನನ್ನು ಉದ್ಧಾರಮಾಡಿ ಅವನಿಗೆ ಶಾಶ್ವತ ಸುಖ-ಸಂತೋಷಗಳನ್ನು ನೀಡುವುದು ಎಂದು ಹೇಳಿದರು.
     ಹಿರಿಯ ಮುಂದಾಳುಗಳಾದ ರಮೇಶ್ ಕಾರಂತ ಬೆದ್ರಡ್ಕ, ಪ್ಲಸ್ ಟು ನಿವೃತ್ತ ಅಧ್ಯಾಪಕ ನಾರಾಯಣ ರಾವ್ ಮುಂತಾದವರು ಶುಭವನ್ನು ಹಾರೈಸಿ ಮಾತನಾಡಿದರು.
     ಈ ಸಂದರ್ಭದಲ್ಲಿ ಏಳು ಎಸ್ಸೆಸ್ಸೆಲ್ಸಿ ಹಾಗು ಪ್ಲಸ್ ಟು ತರಗತಿಗಳಲ್ಲಿ ಉತ್ತಮ ಗ್ರೇಡುಗಳೊಂದಿಗೆ ತೇರ್ಗಡೆಯಾದ ಸಿಂಧು ಪಿ.ಆರ್.ಕುಳ, ಪ್ರಜ್ವಲ್ ಹೇರಳ ಉಡುವ, ಶ್ರೀವಿದ್ಯಾ ಎಸ್. ನೀರಾಳ, ಅಭಯ ಕಾರಂತ ಬೆದ್ರಡ್ಕ, ಸಿಂಚನಾ ಹೊಳ್ಳ ಎಲ್ಲಂಗಳ, ನಯನಾ ಬಿ.ಬನ್ನೂರು ಹಾಗು ಚರಿತಾ ಬಿ.ಬನ್ನೂರು ಅವರಿಗೆ ದಿ.ವೆಂಕಟ್ರಮಣ ಮಯ್ಯ ಹಾಗು ದಿ.ಕಾವೇರಿ ಅಮ್ಮ ಅವರ ಸ್ಮರಣಾರ್ಥ ಪ್ರತಿವರ್ಷ ನೀಡಲಾಗುವ ಸ್ಮರಣಿಕೆ ಮತ್ತು ಗುರು ಶ್ರೀ ಶಂಕರಾನಂದ ಪ್ರತಿಷ್ಠಾನ ಮುಗು ಹಾಗು ರಾಧಾಕೃಷ್ಣ ಮಯ್ಯ ಪಟ್ಲ ಅವರ ವತಿಯಿಂದ ನೀಡಲಾದ ಆರ್ಥಿಕ ಪುರಸ್ಕಾರಗಳನ್ನು ವಿತರಿಸಲಾಯಿತು. ಪುರಸ್ಕøತರು ಈ ಸಮ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದರು.
     ಸಮಾರಂಭದಲ್ಲಿ ಯುವ ಕವಯಿತ್ರಿ ಪರಿಣಿತ ರವಿ ಅವರನ್ನು ಶಾಲು ಹೊದಿಸಿ ಸಮ್ಮಾನಿಸಲಾಯಿತು. ಇತ್ತೀಚೆಗೆ ಅವರ ಕಥಾ ಸಂಕಲನವಾದ `ವಾತ್ಸಲ್ಯ ಸಿಂಧು' ಹಾಗು `ಸುಪ್ತ ಸಿಂಚನ' ಎಂಬ ಕವನ ಸಂಕಲನವು ಬಿಡುಗಡೆಯಾಗಿತ್ತು. ಇವರಿಗೆ ಉತ್ತಮ ಭವಿಷ್ಯವನ್ನು ಕೋರಿ ಅತಿಥಿಗಳು ಮಾತನಾಡಿದರು.
      ಸಂಪರ್ಕ ಸಭೆಗಿಂತ ಮೊದಲು ವಿಷ್ಣು ಸಹಸ್ರನಾಮ ಪಾರಾಯಣ ಹಾಗು ಭಜನಾ ಸಂಕೀರ್ತನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಂಗಸಂಸ್ಥೆಯ ಮುಂದಿನ ಸಂಪರ್ಕ ಸಭೆಯನ್ನು ಜು.7 ರಂದು ಅಪರಾಹ್ನ ಬೇಳದ ಕುಮಾರಮಂಗಲದ ರಾಮಚಂದ್ರ ಅಡಿಗರ ಮನೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ವಿನಂತಿಸಲಾಯಿತು. 
      ಅಂಗಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಎಂ.ಮಧೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚಂದ್ರಶೇಖರ ರಾವ್ ಏತಡ್ಕ ವಂದಿಸಿದರು. ಕೋಶಾಧಿಕಾರಿ ಕೃಷ್ಣ ಕಾರಂತ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries