HEALTH TIPS

'ಶ್ರೀರಾಮ ಕಥಾಮಂಜರಿ' ಪರಿಷ್ಕøತವಾಗಿ ಮರುಮುದ್ರಿತ ಹೊತ್ತಗೆಚ ಲೋಕಾರ್ಪಣೆ- ಜ್ಞಾನಪರಂಪರೆ ಬಲಿಷ್ಠತೆಯಿಂದಲೇ ಭಾರತಕ್ಕೆ ಭವಿಷ್ಯ: ಎಂ.ನಾ.


                       'ಶ್ರೀರಾಮಕಥಾಮಂಜರಿ' ಗ್ರಂಥದಾನ ಅಭಿಯಾನಕ್ಕೆ ಕರ್ನಾಟಕ ಬ್ಯಾಂಕ್ ಪ್ರಾಯೋಜಕತ್ವ
      ಬದಿಯಡ್ಕ: ಖ್ಯಾತ ಸಾಹಿತಿ ಕುಂಟಿಕಾನ ಮಠದ ಮನೆಯ ವಿದ್ವಾನ್ ದಿ. ಬಾಲಕೃಷ್ಣ ಭಟ್ ವಿರಚಿತ ಗದ್ಯಕಾವ್ಯ 'ಶ್ರೀರಾಮ ಕಥಾಮಂಜರಿ' ಪರಿಷ್ಕøತವಾಗಿ ಮರುಮುದ್ರಿಸಲ್ಪಟ್ಟು ಬಿಡುಗಡೆಗೊಂಡಿದೆ. 115 ಅಧ್ಯಾಯಗಳ 800 ಪುಟಗಳ ಈ ಬೃಹದ್ಗ್ರಂಥವನ್ನು ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಶಾಲಾ, ಕಾಲೇಜುಗಳಿಗೆ ಉಚಿತವಾಗಿ ನೀಡಲು ಕರ್ನಾಟಕ ಬ್ಯಾಂಕ್ ಪ್ರಾಯೋಜಿಸಿದೆ. ಇದರಂಗವಾಗಿ ಗ್ರಂಥ ಹಸ್ತಾಂತರ ಅಭಿಯಾನಕ್ಕೆ ಜೂನ್ 1ರಂದು ಕುಂಟಿಕಾನ ಮಠದ ಮನೆಯಲ್ಲಿ ಚಾಲನೆಗೊಂಡಿತು.
    ಕುಂಟಿಕಾನ ಮಠ ಬಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಅಭಿಯಾನ ಆರಂಭಗೊಂಡಿದ್ದು, ಅವರ ಮನೆಯಲ್ಲಿ ದಿವಂಗತರ ಪತ್ನಿ ರುಕ್ಮಿಣಿ ಬಾಲಕೃಷ್ಣ ಭಟ್ ದೀಪ ಬೆಳಗಿಸಿ ಚಾಲನೆ ಇತ್ತರು.  ಪತ್ರಕರ್ತ, ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ, ಸಾಂಸ್ಕøತಿಕ ಚಿಂತಕ-ಲೇಖಕ ಎಂ.ನಾ. ಚಂಬಲ್ತಿಮಾರ್ ಅವರಿಗೆ ಗ್ರಂಥ ಹಸ್ತಾಂತರಿಸುವ ಮೂಲಕ ನಡೆದ ಅಭಿಯಾನದ ಉದ್ಘಾಟನೆ ನೆರವೇರಿತು. ಈ ಸಂದರ್ಭ ಮಾತನಾಡಿದ ಎಂ.ನಾ. ಅವರು "ದೇಶ ಬೆಳೆಯುತ್ತಿದೆಯಾದರೂ ನಮ್ಮ ಸಾಂಸ್ಕøತಿಕ ಜೀವನ ಮೌಲ್ಯಗಳು ಕುಸಿಯುತ್ತಿವೆ. ಭಾರತ 'ವಿಶ್ವಗುರು' ಎಂದೆನಿಸಬೇಕಿದ್ದರೆ ಕೇವಲ ಆರ್ಥಿಕ ಬಲಾಢ್ಯತೆಯೊಂದೇ ಅಲ್ಲ, ದೇಶದ ಬೌದ್ಧಿಕ ಜ್ಞಾನ ಪರಂಪರೆ ಬಲಿಷ್ಟಗೊಳ್ಳಬೇಕು. ಮಾನವನ ವ್ಯಕ್ತಿತ್ವ ಸಂಸ್ಕಾರಗೊಳ್ಳಬೇಕಿದ್ದರೆ ರಾಮಾಯಣದಂತಹಾ ಕಥನಗಳು ಗೊತ್ತಿರಬೇಕು. ಅದು ಭಾರತದ ಆತ್ಮ, ಪುರುಷಾರ್ಥದ ಅನಾವರಣ. ದೇಶದ ಪ್ರಾಚೀನ ಜ್ಞಾನಪರಂಪರೆಯನ್ನು ಮತ್ತೆ ಬಲಿಷ್ಠಗೊಳಿಸುವ ಮೂಲಕ ಮಾತ್ರವೇ ಭಾರತವನ್ನು ಮರುರೂಪಿಸಲು ಸಾಧ್ಯ, ಈ ದೃಷ್ಟಿಯಲ್ಲಿ ಸಮಗ್ರ ರಾಮಾಯಣವನ್ನು ಹೊಸಗನ್ನಡದ ಗದ್ಯಕಾವ್ಯ ರೂಪದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸುತ್ತಿರುವುದು ನಾಳಿನ ಭವಿಷ್ಯ ರೂಪಿಸುವ ಶ್ರಧ್ಧೆ,ಕಾಳಜಿಯ ಸ್ತುತ್ಯರ್ಹ ಕಾಯಕ. ಇಂಥ ಅಭಿಯಾನದ ಜತೆಗೆ ಸರ್ವರೂ ಕೈಜೋಡಿಸಬೇಕು ಎಂದವರು ನುಡಿದರು.
     ಸಾಹಿತಿ, ಚಿಂತಕ ವಿದ್ವಾನ್ ಎಸ್.ಬಿ ಖಂಡಿಗೆ  ಅಧ್ಯಕ್ಷತೆ ವಹಿಸಿದ್ದರು. ಗ್ರಂಥ ರಚಿಸಿದ ಬಾಲಕೃಷ್ಣ ಭಟ್ಟರ ಪುತ್ರ ಕುಮಾರ್ ಕುಂಟಿಕಾನಮಠ ಸ್ವಾಗತಿಸಿ, ನಿರೂಪಿಸಿದರು. ಚೈತ್ರಾ ಕೆ. ಕಾವಿನಮೂಲೆ ಪ್ರಾರ್ಥನೆ ಹಾಡಿದರು. ರಾಜಾರಾಮ ಕಾವಿನಮೂಲೆ, ಪ್ರವೀಣಾ ಸರಸ್ವತಿ ಕಾವಿನಮೂಲೆ, ಗೋವಿಂದ ಭಟ್ ಕುಂಟಿಕಾನ ಮೊದಲಾದವರು ಉಪಸ್ಥಿತರಿದ್ದರು.
    ಇಂಗ್ಲೆಂಡಿನ  ಅರಸ್ ಮಾರ್ಕೆಟಿಂಗ್ ಲಿಮಿಟೆಡ್ ಈ ಗ್ರಂಥವನ್ನು ಪ್ರಕಟಿಸಿದ್ದು, ಪ್ರಾಯೋಜಕತ್ವದ ಮೂಲಕ ಶಾಲಾ, ಕಾಲೇಜುಗಳಿಗೆ ಉಚಿತ ವಿತರಣೆಯ ಅಭಿಯಾನ ನಡೆಯುತ್ತಿದೆ. ಭಾರತೀಯ ಬದುಕಿನ ನೈತಿಕ ಮೌಲ್ಯಗಳ ಮೂಲಾಧಾರವಾದ ಶ್ರೀರಾಮನ ಜೀವನಯಾನದ ಸಮಗ್ರ ಕತೆಗಳು ನಮ್ಮ ಆರ್ಷೇಯ ಸಂಸ್ಕøತಿಯ ಕೈಗನ್ನಡಿಯಾಗಿದ್ದು, ಯುವ ಪೀಳಿಗೆ ಇದನ್ನು ಓದುವ ಮೂಲಕ, ತಿಳಿಯುವ ಮೂಲಕ ನಾಳೆಗಳನ್ನು ನಿರ್ಮಿಸಬೇಕೆನ್ನುವುದೇ ಕುಂಟಿಕಾನಮಠ ಬಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ನ ಉದ್ದೇಶ. ಶಾಲೆ, ಕಾಲೇಜು ಮತ್ತು ಯುವಕ ಸಂಘ ಹಾಗೂ ಗ್ರಂಥಾಲಯ, ಮನೆಗಳಲ್ಲಿ ಅಗತ್ಯ ಇರಬೇಕಾದ ಗ್ರಂಥ ಇದಾಗಿದ್ದು, ಪ್ರಾಯೋಜಕರು ಮತ್ತು ಪ್ರೋತ್ಸಾಹಕರು ಈಗ್ರಂಥವನ್ನು ಆಸಕ್ತ ಜನರಿಗೆ ತಲುಪಿಸಲು ನೆರವಾಗಬೇಕೆಂದು ಟ್ರಸ್ಟ್ ವಿನಂತಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries