ಅಯೋಧ್ಯ: ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 18 ನೂತನ ಶಿವಸೇನಾ ಸಂಸದರೊಂದಿಗೆ ಪಕ್ಷದ ಅಧ್ಯಕ್ಷ ಉದ್ದವ್ ಠಾಕ್ರೆ ಭಾನುವಾರ ಅಯೋಧ್ಯೆಯಲ್ಲಿನ ರಾಮ್ ಲಾಲ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಭಾನುವಾರ ಬೆಳಿಗ್ಗೆ ತಮ್ಮ ಪುತ್ರ ಅದಿತ್ಯ ಜೊತೆಗೆ ಉದ್ಧವ್ ಠಾಕ್ರೆ ಅಯೋಧ್ಯೆಗೆ ತೆರಳಿ, ಪಕ್ಷದ ಸಂಸದರನ್ನು ಭೇಟಿಯಾದರು. ನಂತರ ರಾಮ್ ಲಾಲ ದೇವಾಲಯದಲ್ಲಿ ಸಾಮೂಹಿಕವಾಗಿ ಪ್ರಾಥನೆ ಸಲ್ಲಿಸಿದರು.
ಮಧ್ಯಾಹ್ನ ಉದ್ದವ್ ಠಾಕ್ರೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಬಳಿಕ ಮುಂಬೈಗೆ ಆಗಮಿಸಿದರು. ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಮ ದೇವಾಲಯ ನಿರ್ಮಾಣ ವಿಚಾರದಲ್ಲಿ ಮೈತ್ರಿ ಪಕ್ಷವಾಗಿರುವ ಬಿಜೆಪಿ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಈ ರೀತಿ ಶಿವಸೇನೆ ಅಯೋಧ್ಯೆಗೆ ಭೇಟಿ ನೀಡಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.