ಮುಳ್ಳೇರಿಯ : ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಮುಳ್ಳೇರಿಯ ವಲಯ ಸಮಿತಿಯ ಮಹಾಸಭೆಯು ಅಡೂರಿನ ಕಾಯರ್ತಿಮಾರು ಕೃಷ್ಣ ಸರಳಾಯರ ಮನೆಯಲ್ಲಿ ಭಾನುವಾರ ನಡೆಯಿತು. ವಲಯ ಅಧ್ಯಕ್ಷ ಕೋಟೆಗದ್ದೆ ದಿನೇಶ್ ಕುಮಾರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ಹಾಗೂ ಅಂಬಿತ್ತಿಮಾರು ಚಂಚಲಾ ಸರಳಾಯರನ್ನು ಉತ್ತಮ ಸೇವಕ ಹಾಗೂ ಉತ್ತಮ ಸೇವಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶೈಕ್ಷಣಿಕ ಪ್ರತಿಭೆಗಳಾದ ಅನನ್ಯಾ ಭಾರಿತ್ತಾಯ, ರಾಜಿತ ಕೆ ಆರ್, ವಿಶೇಷ ಶೈಕ್ಷಣಿಕ ಪುರಸ್ಕಾರ ಪಡೆದ ಪ್ರಮಿತಾ ಎ ಹಾಗೂ ವಿಶೇಷ ಪ್ರತಿಭಾ ಪುರಸ್ಕಾರ ಪಡೆದ ಆದ್ಯಂತ್ ಅಡೂರು ಅವರನ್ನು ಗೌರವಿಸಲಾಯಿತು. ಸಭೆಯಲ್ಲಿ ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಲಕ್ಷ್ಮೀಶ ರಾವ್ ಕಡಂಬಾರ್, ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಅರವಿಂದ ಕುಮಾರ್ ಅಲೆವೂರಾಯ, ಜಿಲ್ಲಾ ಶಿವಳ್ಳಿ ಯುವಶಕ್ತಿ ಕಾರ್ಯದರ್ಶಿ ಚೇತನ್ ಕುಣಿಕುಳ್ಳಾಯ, ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಅನಂತರಾಮ ಕಡಂಬಳಿತ್ತಾಯ, ವೀಕ್ಷಕರಾಗಿ ಆಗಮಿಸಿದ ಕಕ್ಕೆಪ್ಪಾಡಿ ವಿಷ್ಣು ಭಟ್ ಹಾಗೂ ಶೋಭಿತಾ ಮಂಜುನಾಥ್ ಕಾಂಞಂಗಾಡ್ ಅವರು ಭಾಗವಹಿಸಿದ್ದರು. ಅನಂತರಾಮ ಕಡಂಬಳಿತ್ತಾಯ ವಾರ್ಷಿಕ ವರದಿ ಮಂಡಿಸಿದರು. ಶ್ರೀಪ್ರಸಾದ ಭಾರಿತ್ತಾಯ ಲೆಕ್ಕಪತ್ರ ಮಂಡಿಸಿದರು. ಸಮಾವೇಶದಲ್ಲಿ ಪ್ರಕಾಶ್ ಪಾಂಙಣ್ಣಾಯ, ಶ್ರೀಪತಿ ಕಡಂಬಳಿತ್ತಾಯ, ರಾಜಾರಾಮ ಸರಳಾಯ, ಪ್ರೇಮಾ ಎಂ ಭಾರಿತ್ತಾಯ, ನಾರಾಯಣ ಅಡಿಗ ಕೋಟೆಗದ್ದೆ, ಉದಯ ಸರಳಾಯ ಅಂಬಿತ್ತಿಮಾರು ಮೊದಲಾದವರು ಭಾಗವಹಿಸಿದ್ದರು. ನಂದಿತ ಹಾಗೂ ರಾಜಿತ ಪ್ರಾರ್ಥಿಸಿದರು. ಕೃಷ್ಣ ಸರಳಾಯ ಕಾಯರ್ತಿಮಾರು ಸ್ವಾಗತಿಸಿದರು. ಪ್ರಶಾಂತ ರಾಜ ವಿ ತಂತ್ರಿ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಸಮಾವೇಶ ಮುಕ್ತಾಯವಾಯಿತು.
ನೂತನ ಸಮಿತಿ ರಚನೆ : ಶಿವಳ್ಳಿ ಬ್ರಾಹ್ಮಣ ಸಭಾದ ಮುಳ್ಳೇರಿಯ ವಲಯದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ಆಯ್ಕೆಯಾದರು. ಶ್ರೀಪತಿ ಕಡಂಬಳಿತ್ತಾಯ, ರವಿರಾಜ್ ಕೇಕುಣ್ಣಾಯ ಆಲಂತಡ್ಕ (ಉಪಾಧ್ಯಕ್ಷರು), ಪ್ರಶಾಂತ ರಾಜ ವಿ ತಂತ್ರಿ (ಕಾರ್ಯದರ್ಶಿ), ನಳಿನಾಕ್ಷಿ ಮೂಡಿತ್ತಾಯ, ಸತ್ಯನಾರಾಯಣ ಮನೊಳಿತ್ತಾಯ(ಜೊತೆ ಕಾರ್ಯದರ್ಶಿ), ಶ್ರೀಪ್ರಸಾದ ಭಾರಿತ್ತಾಯ (ಖಾಜಾಂಜಿ) ಆಯ್ಕೆಯಾದರು. ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪುಷ್ಪಾ ಎ ಸರಳಾಯ ಆಯ್ಕೆಯಾದರು. ಸಜಿತಾ ಪಿ ಕೆ (ಕಾರ್ಯದರ್ಶಿ), ಜಯಲಕ್ಷ್ಮಿ ಪಿ ತಂತ್ರಿ(ಜೊತೆ ಕಾರ್ಯದರ್ಶಿ), ಉಷಾರಾಣಿ ಸರಳಾಯ (ಖಜಾಂಜಿ) ಆಯ್ಕೆಯಾದರು. ಇದೇ ಜುಲೈ 7ರಂದು ಬೆಳ್ಳೂರಿನ ಮಹಾವಿಷ್ಣು ಕ್ಷೇತ್ರದಲ್ಲಿ ನಡೆಯುವ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಮಾವೇಶವನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.