ಮಂಜೇಶ್ವರ: ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾದ ಪ್ರಯುಕ್ತ ಕೋಳ್ಯೂರು ಶ್ರೀ ಶಂಕರನಾರಾಯಣ ದೇವರಿಗೆ ಏಕಾದಶ ರುದ್ರ ಪವಮಾನ ಹೋಮ, ಮಧ್ಯಾಹ್ನದ ಅನ್ನ ಸಂತರ್ಪಣೆ ಯನ್ನು `ನಮೋ ಅಭಿಮಾನಿ ಬಳಗ' ಕೋಳ್ಯೂರು ಇವರ ಅಭಿಷ್ಟದಂತೆ ಇತ್ತೀಚೆಗೆ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ದೈಗೋಳಿಯಲ್ಲಿರುವ ಶ್ರೀ ಸತ್ಯ ಸಾಯೀ ವೃದ್ಧಾಶ್ರಮದ ನಿವಾಸಿಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ನೇತಾರರಾದ ರವೀಶ ತಂತ್ರಿ ಕುಂಟಾರು, ವಕೀಲರಾದ ನವೀನ್ ರಾಜ್, ಆದರ್ಶ ಬಿ.ಯಂ. ಹಾಗೂ ಸಂತೋಷ ದೈಗೋಳಿ ಮೊದಲಾದವರು ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿ ಇನ್ನು ಮುಂದೆಯೂ ಪಕ್ಷ, ಸಂಘಟನೆಯ ವತಿಯಿಂದ ಇಂತಹಾ ಸಮಾಜಮುಖೀ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ಅರಿಬೈಲು ಗೋಪಾಲ ಶೆಟ್ಟಿ ಹಾಗೂ ಸೇಸಪ್ಪ ಅರಿಂಗುಲ ಮಾರ್ಗದರ್ಶನ ನೀಡಿದರು.