ಕಾಸರಗೋಡು: ಆಹಾರ ಸುರಕ್ಷಾ ಇಲಾಖೆಯ ನೇತೃತ್ವದಲ್ಲಿ ಜಿಲ್ಲೆಯ ವ್ಯಾಪಾರ ಸಂಸ್ಥೆಗಳಲ್ಲಿ ತಪಾಸಣೆ ನಡೆಯಿತು.
ವಿವಿಧ ಬ್ರಾಂಡ್ ಗಳ ಪ್ಯಾಕೆಟ್ ಹಾಲು, ಮಸಾಲಾ ಪೊಟ್ಟಣ ಇತ್ಯಾದಿಗಳ ತಪಾಸಣೆ ನಡೆಸಲಾಗಿದೆ. ಹೆಚ್ಚುವರಿ ತಪಾಸಣೆ ಅಗತ್ಯವಿರುವ ಸಾಮಾಗ್ರಿಗಳ ಸ್ಯಾಂಪಲ್ ಗಳನ್ನು ಕೋಝಿಕೋಡ್ ನ ಫುಡ್ ಅನಲಿಸ್ಟ್ ಲ್ಯಾಬ್ ಗೆ ರವಾನಿಸಲಾಗಿದೆ.
ಈ ತಪಾಸಣೆಯ ಅಂಗವಾಗಿ ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ರಾತ್ರಿಕಾಲದಲ್ಲಿ ವಾಹನಗಳ ಮೂಲಕ ರವಾನಿಸುವ ಮೀನು ತಪಾಸಣೆ ನಡೆಸಲಾಗಿದೆ. ಸೆಂಟ್ರಲ್ ಇನ್ಸ್ ಸ್ಟಿಟ್ಯೂಟ್ ಆಫ್ ಫಿಷರೀಸ್ ಟೆಕ್ನಾಲಜಿ ಸಿದ್ಧಪಡಿಸಿರುವ ಕಿಟ್ ಗಳ ಬಳಕೆಯೊಂದಿಗೆ ನಡೆಸಿರುವ ತಪಾಸಣೆಯಲ್ಲಿ ಫೋರ್ಮಾಲ್ ಮತ್ತು ಅಮೋನಿಯಂ ಉಪಯೋಗಿಸಿರುವುದು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿರುವರು.