ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಕಾರ್ಯವೆಸಗುವ ಕ್ಯಾಂಟೀನ್‍ನಲ್ಲಿ ನೀರಿಲ್ಲದೆ ತೊಂದರೆಯಾಗಿದೆ. ಕಳೆದ ಮೂರು ದಿನಗಳಿಂದ ಈ ಸ್ಥಿತಿ ಮುಂದುವರಿಯುತ್ತಿದೆ. ಧಾರಾಕಾರ ಮಳೆ ಸುರಿದು ಬಾವಿ ಮತ್ತಿತರ ಜಲಸಂಪನ್ಮೂಲಗಳಲ್ಲಿ ನೀರು ತುಂಬ ಬೇಕಾಗಿದ್ದ ಈ ದಿನಗಳಲ್ಲಿ ಸಮರ್ಪಕ ರೀತಿಯ ಮಳೆ ಸುರಿಯದ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈ ಕ್ಯಾಂಟೀನ್‍ಗೆ ದೈನಂದಿನ 5000 ಲೀಟರ್ ನೀರು ಅಗತ್ಯವಿದೆ. ಇದೀಗ 1000 ಲೀಟರ್ ನೀರಿಗೆ ತಲಾ 400 ರೂ. ನಂತೆ ಬೆಲೆ ತೆತ್ತು ಹೊರಗಿನಿಂದ ನೀರು ಖರೀದಿಸುವುದರಿಂದ ಕ್ಯಾಂಟೀನ್‍ಗೆ ನಷ್ಟವನ್ನುಂಟು ಮಾಡುತ್ತಿದೆ.ಪರಿಸ್ಥಿತಿ ಹೀಗೇ ಮುಂದುವರಿದರೆ ಕ್ಯಾಂಟೀನ್ ಮುಚ್ಚುಗಡೆಗೊಳಿಸುವ ಭೀತಿ ಎದುರಾಗಲಿದೆ.
ಜನರಲ್ ಆಸ್ಪತ್ರೆ ಕ್ಯಾಂಟೀನ್‍ನಲ್ಲಿ ನೀರಿಲ್ಲ : ಪರದಾಟ
0
ಜೂನ್ 16, 2019