ಕುಂಬಳೆ: 2019-20 ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಸೇರ್ಪಡೆಗೊಂಡ ಧರ್ಮತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೋಳಾರು ಶ್ರೀದುರ್ಗಾ ಯುವಕ ಸಂಘದ ವತಿಯಿಂದ ಕಲಿಕೋಪಕರಣಗಳ ಕಿಟ್ ನ್ನು ಗುರುವಾರ ಪ್ರವೇಶೋತ್ಸವದ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ತಲೆಮುಗರು ಸೀತಾರಾಮ ಶೆಟ್ಟಿ ಯವರು ವಿತರಿಸಿದರು.
ಪುತ್ತಿಗೆ ಗ್ರಾಮ ಪಂಚಾಯತಿ ಸದಸ್ಯ ಚನಿಯ ಪಾಡಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕಿ ಶಾರದ ಅಮ್ಮ, ಮಂಜೇಶ್ವರ ಬಿ. ಆರ್.ಸಿ.ತರಬೇತುದಾರ ಕೃಷ್ಣಪ್ರಕಾಶ, ಮಾತೃಮಂಡಳಿ ಅಧ್ಯಕ್ಷೆ ಭಾರತಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜೋನ್ ಡಿ ಸೋಜ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಯನ್. ಮಹಾಲಿಂಗ.ಭಟ್ ಸ್ವಾಗತಿಸಿ, ಹಿರಿಯ ಅಧ್ಯಾಪಿಕೆ ರೇವತಿ ಅಮ್ಮ ವಂದಿಸಿದರು. ಅಧ್ಯಾಪಿಕೆ ಗಾಯತ್ರಿ ಕಡಂಬಾರ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರಾದ ರಾಮ ಮೋಹನ್ ಅವರು ಮುಖ್ಯಮಂತ್ರಿಯವರ ಪ್ರವೇಶೋತ್ಸವ ಸಂದೇಶವನ್ನು ವಾಚಿಸಿದರು.