ಕಾಸರಗೋಡು: ಸಾಹಿತ್ಯ ಕ್ಷೇತ್ರ, ಕಲಾ ಕ್ಷೇತ್ರ ಭಿನ್ನ ಭಿನ್ನವಾಗಿದ್ದರೂ ಅವುಗಳು ಒಂದಕ್ಕೊಂದು ಪೂರಕ. ಇವುಗಳು ಸಮಾಜವನ್ನು ಕಟ್ಟುವ ಕೆಲಸಮಾಡುತ್ತವೆ. ಲಲಿತ ಕಲೆಗಳು ಸಮಾಜವನ್ನು ಜೀವಂತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಚಿನ್ನಪ್ಪ ಗೌಡ ಅವರು ಹೇಳಿದರು.
ಅವರು ಕರಂದಕ್ಕಾಡ್‍ನ ಪದ್ಮಗಿರಿ ಕಲಾಕುಟೀರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ನಡೆದ ಸಾಮಾಜಿಕ - ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಹದಿಮೂರನೇ ವಾರ್ಷಿಕೋತ್ಸವ ಮತ್ತು ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡು ಬಹುಭಾಷಾ ಸಂಗಮ ಭೂಮಿಯಾಗಿ ವಿಶಿಷ್ಟವಾದ ಪ್ರದೇಶ. ಈ ಹಿನ್ನೆಲೆಯಲ್ಲಿ ಬಹುತ್ವವನ್ನು ಗೌರವಿಸಬೇಕು. ವಿವಿಧ ಸಂಸ್ಕøತಿ, ಕಲೆ, ಭಾಷೆಗಳ ಸಂಗಮವಾಗಿರುವ ಈ ಪ್ರದೇಶದಲ್ಲಿ ಕಲೆ, ಸಾಹಿತ್ಯ ಭಿನ್ನ ಭಿನ್ನವಾಗಿದ್ದರೂ ಅವುಗಳು ಒಂದಕ್ಕೊಂದು ಪೂರಕವಾಗಿದ್ದು ಸಮಾಜವನ್ನು ಕಟ್ಟುವ ಮತ್ತು ಪರಸ್ಪರ ಪ್ರೀತಿಸುವ, ವಿಶ್ವಾಸ ಮೂಡಿಸುವ, ಪರಸ್ಪರ ಬೆಸೆಯುವ ಕೆಲಸವನ್ನು ನಿರ್ವಹಿಸುತ್ತದೆ. ಕಾಸರಗೋಡಿನಂತಹ ಪ್ರದೇಶದಲ್ಲಿ ಸಾಂಸ್ಕøತಿಕ ನೀತಿಯನ್ನು ರೂಪಿಸಬೇಕು ಎಂದು ಅವರು ಈ ಸಂದರ್ಭ ತಿಳಿಸಿದರು. ಹಲವು ಧ್ವನಿಗಳು ಮೂಡಿಬಂದಾಗಲೇ ಸಮಾಜವನ್ನು ಭದ್ರವಾಗಿ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ರಂಗಚಿನ್ನಾರಿ ಮೂಲಕ ಕಾಸರಗೋಡು ಚಿನ್ನಾ ಮತ್ತು ಅವರ ಬಳಗ ಕಾಸರಗೋಡಿನಲ್ಲಿ ಕನ್ನಡ ಭಾಷೆ ಸಂಸ್ಕøತಿಯನ್ನು ಬೆಳೆಸುವ ಜೊತೆಗೆ ಸಾಂಸ್ಕøತಿಕ ರಂಗವನ್ನು ಪುನ:ಶ್ಚೇತನಗೊಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಂಗಳೂರಿನ ಅರೆಹೊಳೆ ಸಾಂಸ್ಕøತಿಕ ಪ್ರತಿಷ್ಠಾನ ಸಂಸ್ಥಾಪಕ ಅರೆಹೊಳೆ ಸದಾಶಿವ ರಾವ್ ಅವರು ಅಭಿನಂದನಾ ಭಾಷಣ ಮಾಡಿದರು.
ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಡಾ.ಯು.ಮಹೇಶ್ವರಿ, ನಾಟಕ ಕ್ಷೇತ್ರದ ಸಾಧನೆಗಾಗಿ ಕೃಷ್ಣ ಜಿ.ಮಂಜೇಶ್ವರ ಅವರಿಗೆ `ರಂಗ ಚಿನ್ನಾರಿ ಪ್ರಶಸ್ತಿ' ಮತ್ತು ಸಾಂಸ್ಕøತಿಕ ಕ್ಷೇತ್ರದ ಸಾಧನೆಗಾಗಿ ಸನ್ನಿಧಿ ಟಿ.ರೈ ಪೆರ್ಲ ಮತ್ತು ಸಂಗೀತ ಕ್ಷೇತ್ರದ ಸಾಧನೆಗಾಗಿ ಕೃಷ್ಣ ಕಿಶೋರ ಪೆರ್ಮುಖ ಅವರಿಗೆ `ರಂಗಚಿನ್ನಾರಿ ಯುವ ಪ್ರಶಸ್ತಿ' ಯನ್ನು ಡಾ.ಚಿನ್ನಪ್ಪ ಗೌಡ ಅವರು ಪ್ರದಾನಮಾಡಿದರು.
ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿದರು. ಇನ್ನೋರ್ವ ನಿರ್ದೇಶಕ ಸತ್ಯನಾರಾಯಣ ಅವರು ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಕೃಷ್ಣ ಕಿಶೋರ್ ಪೆರ್ಮುಖ ಅವರಿಂದ ಭಕ್ತಿ ಭಾವ ಗೀತೆಗಳ `ಭಾವಗಂಗೆ' ಕಾರ್ಯಕ್ರಮ ಜರಗಿತು.
ಭರತನಾಟ್ಯ ಅಭಿಯಾನ : ರಂಗಚಿನ್ನಾರಿ ಕಳೆದ 13 ವರ್ಷಗಳಿಂದ ನಡೆಸಿಕೊಂಡು ಬಂದ ವಿವಿಧ ಕಾರ್ಯಕ್ರಮಗಳು, ಅಭಿಯಾನಗಳು ಮತ್ತು ಸಾಧನೆಗಳನ್ನು ವಿವರಿಸಿದ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮುಂದಿನ ದಿನಗಳಲ್ಲಿ `ಭರತನಾಟ್ಯ ಅಭಿಯಾನ' ಆರಂಭಿಸುವುದಾಗಿ ತಿಳಿಸಿದರು. ಕಾಸರಗೋಡಿನ ವಿವಿಧ ಶಾಲೆಗಳ 5000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕನ್ನಡ ನಾಡಗೀತೆ ಕಲಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ಕರ್ನಾಟಕಕ್ಕೆ ಮಾದರಿಯಾಗಿದೆ ಎಂದರು. ರಂಗಚಿನ್ನಾರಿ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಗೊಳಿಸುವ ಜೊತೆಗೆ ಪ್ರತಿಭಾವಂತ ಮಕ್ಕಳಿಗೆ ಪೆÇ್ರೀತ್ಸಾಹ ನೀಡುತ್ತಲೇ ಬಂದಿದೆ. ಕನ್ನಡ ಭಾಷೆ, ಸಂಸ್ಕøತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಮೂಲಕ ಕಾಸರಗೋಡಿನಲ್ಲಿ ಕನ್ನಡ ಸಂಸ್ಕøತಿಯನ್ನು ಉಳಿಸುವ ಮತ್ತು ಬೆಳೆಸುವ ಕೆಲಸ ಮಾಡುತ್ತಿದೆ ಎಂದರು.