ಬದಿಯಡ್ಕ: ಚೆಂಗಳ ಪಂಚಾಯತಿ ಅರ್ಲಡ್ಕದಲ್ಲಿ ಸೊಳ್ಳೆ ಸಾಂದ್ರತೆ ಅಧ್ಯಯನ, ವೆಕ್ಟರ್ ಸ್ಡಡಿ ನಡೆಸಲಾಯಿತು. ಕಳೆದ ವರ್ಷ ಅತ್ಯಂತ ಹೆಚ್ಚು ಡೆಂಗ್ಯೂ ಜ್ವರ ವರದಿಯಾದ ಪ್ರದೇಶವಾಗಿದೆ ಅರ್ಲಡ್ಕ.
ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಪ್ರಾಣಿಜನ್ಯ ನಿಯಂತ್ರಣ ವಿಭಾಗದೊಂದಿಗೆ ಸಂಯುಕ್ತವಾಗಿ ಅಧ್ಯಯನ ನಡೆಸಲಾ¬ತು. ಮನೆಗಳು, ತೋಟಗಳು, ಇತರ ಕಟ್ಟಡಗಳು, ಸಾರ್ವಜನಿಕ ಸ್ಥಳಗಳು, ಟೆರೇಸ್‍ಗಳು ಮೊದಲಾದೆಡೆಗಳಲ್ಲಿ ಪರಿಶೋಧನೆ ನಡೆಸಲಾಯಿತು. ಕಾರ್ಯಕ್ರಮವನ್ನು ಪಂಚಾಯತಿ ಸದಸ್ಯೆ ಸಿಂಧು ಉದ್ಘಾಟಿಸಿದರು. ಆರೋಗ್ಯ ಪರಿವೀಕ್ಷಕ ಜೋನ್ ವರ್ಗೀಸ್ ಅಧ್ಯಕ್ಷತೆ ವಹಿಸಿದರು. ಬಿ.ಅಶ್ರಪ್ ಸ್ವಾಗತಿಸಿ, ನೆಕ್ರಾಜೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಒ.ಪಿ.ಹನೀಫ್, ರಾಜೇಶ್ ಮೊದಲಾದವರು ಮಾತನಾಡಿದರು.