ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ `ನಲ್ಲ ಪಾಡಂ ಮತ್ತು ಸಮಾಜ ವಿಜ್ಞಾನ ಕ್ಲಬ್'ನ ಸಂಯುಕ್ತ ಆಶ್ರಯದಲ್ಲಿ `ಹರಿತ ಕೇರಳಂ' ಕಾರ್ಯಕ್ರಮದ ಅಂಗವಾಗಿ ಉಪಯೋಗಿಸಿ ತ್ಯಜಿಸುವಂತಹ ಲೇಖನಿಗಳ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.
5 ನೇ ತರಗತಿಯಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಾವು ಉಪಯೋಗಿಸಿದ ಲೇಖನಿಗಳನ್ನು ಸಂಗ್ರಹಿಸಿ ವಿದ್ಯಾಲಯದ ಉಪಪ್ರಾಂಶುಪಾಲೆ ಸಂಗೀತ ಪ್ರಭಾಕರನ್ ಅವರ ಸಮ್ಮುಖದಲ್ಲಿ ಸಂಗ್ರಹ ಪೆಟ್ಟಿಗೆಗೆ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಸಿಂಧು ಶಶೀಂದ್ರನ್, ಅಧ್ಯಾಪಿಕೆಯರಾದ ಕೃತಿ, ಸಂಧ್ಯಾರಾಣಿ, ಉಷಾ ಸಿ.ಜಿ. ಹಾಗು ಅಧ್ಯಾಪಕ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.