ಮುಳ್ಳೇರಿಯ: ಕಾರಡ್ಕ ಬ್ಲಾಕ್ ಪಂಚಾಯತಿ ವ್ಯಾಪ್ತಿಯ ಕಾರಡ್ಕ, ದೇಲಂಪಾಡಿ ಹುಡುಗರ ಪ್ರಿಮೆಟ್ರಿಕ್ ಹಾಸ್ಟೆಲ್ ಗಳಲ್ಲಿ ಗಣಿತ, ಇಂಗ್ಲಿಷ್ ವಿಷಯಗಳಲ್ಲಿ ಟ್ಯೂಷನ್ ಶಿಕ್ಷಕರ ಹುದ್ದೆ ಬರಿದಾಗಿದೆ. ಸ್ನಾತಕೋತ್ತರ ಪದವೀಧರರು,ಪದವೀಧರರು, ಟಿ.ಟಿ.ಸಿ. ಅರ್ಹತೆ ಪಡೆದವರು, ಪಿಂಚಣಿ ಪಡೆಯುತ್ತಿರುವ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ಬಿ.ಇಡಿ. ಅರ್ಹತೆ ಪಡೆದ ಮತ್ತು ಸ್ಥಳೀಯರಿಗೆ ಆದ್ಯತೆಯಿದೆ.
ಪ್ರೌಢಶಾಲಾ ಮಟ್ಟದಲ್ಲಿ ಗಣಿತ, ಇಂಗ್ಲಿಷ್ ವಿಷಯಗಳಲ್ಲಿ ಟ್ಯೂಷನ್ ನೀಡಬೇಕಿದೆ. ಟ್ಯೂಷನ್ ಶಿಕ್ಷಕರಿಗೆ 4 ಸಾವಿರ ರೂ. ಪ್ರತಿತಿಂಗಳ ಗೌರವಧನ ಲಭಿಸಲಿದೆ. ಬೆಳಿಗ್ಗೆ ಅಥವಾ ಸಂಜೆ ವೇಳೆ ತಿಂಗಳಿಗೆ ಒಟ್ಟು 20 ತರಗತಿ ನಡೆಸಬೇಕು. ಆಸಕ್ತರು ಬಿಳಿಹಾಳೆಯಲ್ಲಿ ಸಿದ್ಧಪಡಿಸಿದ ಅರ್ಜಿ,ಬಯೋಡಾಟ, ಅರ್ಹತಾಪತ್ರಗಳ ನಕಲು ಸಹಿತ ಜೂ.12ರ ಮೊದಲು ಕಾರಡ್ಕ ಬ್ಲಾಕ್ ಪಂಚಾಯತಿ ಕಚೇರಿಯಲ್ಲಿ ಚಟುವಟಿಕೆ ನಡೆಸುವ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.