ಬದಿಯಡ್ಕ : ಕಳೆದ ಒಂಬತ್ತು ವರ್ಷಗಳಿಂದ ಕಾಸರಗೋಡು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರವು ನೀಡುತ್ತಾ ಬಂದಿರುವ ಪುನರ್ನವ ಟ್ರಸ್ಟ್ ಕಾಸರಗೋಡು ಇದರ ವತಿಯಿಂದ ಪ್ರತಿವರುಷದಂತೆ ಈ ಶೈಕ್ಷಣಿಕ ವರುಷದ ಆರಂಭದಲ್ಲಿ ಮರಿಕಾನ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ಪರಿಕರಗಳನ್ನು ವಿತರಣೆ ಇತ್ತೀಚೆಗೆ ನಡೆಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಟ್ರಸ್ಟಿಗಳಾದ ಡಾ. ರತ್ನಾಕರ ಮಲ್ಲಮೂಲೆ ಹಾಗೂ ನವೀನ ಎಲ್ಲಂಗಳ ಮಾತನಾಡಿದರು.
ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಉಷಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ಅಧ್ಯಾಪಿಕೆಯರಾದ ವಾಣಿಶ್ರೀ, ಸುಚಿತ್ರ ಈ ಸಂದರ್ಭದಲ್ಲಿ ಮತನಾಡಿದರು. ಶಾಲೆಯಲ್ಲಿ ಗಿಡಬೆಳೆಸಿ ಆರೈಕೆ ಮಾಡಿದ ವಿದ್ಯಾರ್ಥಿಗಳಾದ ಧೃತಿ ಹಾಗೂ ಮುಹಮ್ಮದ್ ಸಿರಾಜುದ್ದಿನ್ ಇವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಅಧ್ಯಾಪಿಕೆ ವಾಣಿಶ್ರೀ ಸ್ವಾಗತಿಸಿ, ವಿದ್ಯಾರ್ಥಿಗಳಾದ ಅನಿನಾಶ ಮತ್ತು ಹರಿಮುರಳಿ ಪುನರ್ನವ ಟ್ರಸ್ಟ್ ಗೆ ಕೃತಜ್ಞತೆ ಸಲ್ಲಿಸಿದರು.