ಕಾಸರಗೋಡು: ಬಳಕೆಯಿಲ್ಲದ ಪೆನ್ ಗಳನ್ನು ಸಂಗ್ರಹಿಸಿ ಅವುಗಳನ್ನು ಪುನರ್ ನಿರ್ಮಾಣಕ್ಕೆ ನೀಡುವ "ಪೆನ್ ಫ್ರೆಂಡ್" ಯೋಜನೆ ಮೂಲಕ ಜಿಲ್ಲಾ ಹರಿತ ಕೇರಳಂ ಮಿಷನ್ ಗಮನ ಸೆಳೆಯುತ್ತಿದೆ.
ಜಿಲ್ಲೆಯ ಎಲ್ಲ ಶಿಕ್ಷಣಾಲಯ ಮತ್ತು ಸಂಸ್ಥೆಗಳಲ್ಲಿ ಸಿಬ್ಬಂದಿ ಮತ್ತು ಶಿಕ್ಷಕರ ಸಹಕಾರದೊಂದಿಗೆ ಉಪಯೋಗವಿಲ್ಲದ ಪೆನ್ ಗಳನ್ನು ಸಂಗ್ರಹಿಸಲಾಗುತ್ತಿದೆ.
ಈ ಮೂಲಕ ಸಮಾಜದಲ್ಲಿ ತ್ಯಾಜ್ಯದ ಪ್ರಮಾಣವನ್ನು ಗಣನೀಯವಾಗಿಕಡಿಮೆ ಮಾಡುವುದು, ತ್ಯಾಜ್ಯ ವಿಲೇವಾರಿ ಸಂಬಂಧ ಜಾಗೃತಿಮೂಡಿಸುವುದು, ಒಂದು ಬಾರಿ ಮಾತ್ರ ಬಳಕೆ ಮಾಡುವ ಪೆನ್ ಗಳ ಬಳಕೆ, ಬಾಲ್ಪೆನ್ ಗಳ ಬಳಕೆ ಕಡಿಮೆಮಾಡುವುದು ಇತ್ಯಾದಿ ಇಲ್ಲಿನ ಪ್ರಧಾನ ಉದ್ದೇಶ.
ಇದರ ಅಂಗವಾಗಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ, ಸಂಸ್ಥೆಗಳಲ್ಲಿ ಪೆನ್ಡ್ರಾಪ್ ಬಾಕ್ಸ್ ಇರಿಸಲಾಗಿದೆ. ಇದರಲ್ಲಿ ಬಳಕೆಗೆ ಬಾರದ ಪೆನ್ ಗಳನ್ನು ಹಾಕಲಾಗುತ್ತದೆ. ನಂತರ ನಿಗದಿತ ಅವಧಿಯಲ್ಲಿ ಇವುಗಳನ್ನು ಗುಜರಿ ವ್ಯಾಪಾರಿಗಳಿಗೆ ನೀಡಬೇಕು. ಇಲ್ಲಿ ಲಭಿಸುವ ಆದಾಯದಲ್ಲಿ ಪೇಪರ್ ಪೆನ್ ತಯಾರಿ, ಪರಿಸರ ಸಂರಕ್ಷಣೆ ಚಟುವಟಿಕೆಗಳು ಇತ್ಯಾದಿಗಳಿಗೆ ಬಳಸಬೇಕು ಎಂಬುದು ಯೋಜನೆಯ ನಿಬಂಧನೆಯಾಗಿದೆ.
(ಚಿತ್ರ ಮಾಹಿತಿ:ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೆನ್ಡ್ರಾಪ್ಬಾಕ್ಸ್ ನಲ್ಲಿ ಬಳಕೆಯಿಲ್ಲದ ಪೆನ್ ಹಾಕುವ ಮೂಲಕ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪೆನ್ಫ್ರೆಂಡ್ ಯೋಜನೆಯ ಉದ್ಘಾಟನೆ ನಡೆಸಿದರು.)