ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಹೊಸಬೆಟ್ಟು ಇದರ ಆಶ್ರಯದಲ್ಲಿ ಜೂ.21 ರಿಂದ ಜೂ.27 ರ ವರೆಗೆ ಹೊಸಬೆಟ್ಟು ಕುಲಾಲ ಸಮಾಜ ಮಂದಿರದಲ್ಲಿ ಬೆಳಿಗ್ಗೆ 5 ರಿಂದ 6 ರ ವರೆಗೆ ಉಚಿತ ಯೋಗ ತರಬೇತಿಗಳನ್ನು ಆಯೋಜಿಸಲಾಗಿದೆ.
ಶಿಬಿರದ ಉದ್ಘಾಟನೆ ಕಾರ್ಯಕ್ರಮವು ಜೂ.21 ರಂದು ಬೆಳಿಗ್ಗೆ 5 ಕ್ಕೆ ನಡೆಯಲಿದ್ದು, ಸಭಾಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ದೀಕ್ಷಾ ಕುಂಜತ್ತೂರು ವಹಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಉದಯಶಂಕರ ಭಟ್ ಬಡಾಜೆ ಉದ್ಘಾಟಿಸುವರು.
ಯೋಗ ಶಿಕ್ಷಕ, ಜಮುನಾ ಜನಸೇವಾ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಕಡಂಬಾರು, ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಮಹಿಳಾ ಘಟಕ ಅಧ್ಯಕ್ಷೆ ಗಿರಿಜಾ ಬಂಗೇರ ಉಪಸ್ಥಿತರಿರುವರು. ಹೆಚ್ಚಿನ ವಿವರಗಳಿಗೆ 9446169788, 9495263865 ಸಂಪರ್ಕಿಸಲು ಜಿಲ್ಲಾ ಕುಲಾಲ ಸಂಘ ಪ್ರಕಟನೆಯಲ್ಲಿ ತಿಳಿಸಿದೆ.