ಬದಿಯಡ್ಕ : ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ವಾರ್ಷಿಕ ಮಹಾಸಭೆ ಹಾಗೂ ದೈವಾರ್ಷಿಕ ಚುನಾವಣೆಯು ಸೋಮವಾರ ಸಂಜೆ ನೀರ್ಚಾಲು ವ್ಯಾಪಾರ ಭವನದಲ್ಲಿ ನಡೆಯಿತು.
ಘಟಕದ ಅಧ್ಯಕ್ಷ ಯಂ.ಸುಬ್ರಹ್ಮಣ್ಯ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಅಹಮ್ಮದ್ ಶರೀಫ್ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಯು ಬೆಳವಣಿಗೆಯನ್ನು ಹೊಂದಲು ಸದಸ್ಯರ ಸಹಭಾಗಿತ್ವ ಬಹುಮುಖ್ಯವಾಗಿದೆ. ಎಲ್ಲಾ ಚಟುವಟಿಕೆಗಳಲ್ಲಿಯೂ ಪ್ರತಿಯೊಬ್ಬ ಸದಸ್ಯನೂ ಭಾಗಿಯಾಗಬೇಕು ಎಂದು ತಿಳಿಸಿ ಸಂಘಟನಾತ್ಮಕ ವಿಚಾರಗಳ ಕುರಿತು ಮಾತನಾಡಿದರು. ಬದಿಯಡ್ಕ ವಲಯ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ, ಕುಂಬಳೆ ಘಟಕದ ಅಧ್ಯಕ್ಷ ವಿಕ್ರಮ್ ಪೈ ಕುಂಬಳೆ, ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ ಶುಭ ಹಾರೈಸಿದರು. ನೀರ್ಚಾಲು ಘಟಕದ ಕಾಯದರ್ಶಿ ರವಿ ನೀರ್ಚಾಲು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಶಾಂತ್ ಪೈ ಲೆಕ್ಕಪತ್ರವನ್ನು ಮಂಡಿಸಿ ಮಹಾಸಭೆಯ ಅನುಮೋದನೆಯನ್ನು ಪಡೆಯಲಾಯಿತು. ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಅಧ್ಯಕ್ಷರಾಗಿ ಎಂ.ಸುಬ್ರಹ್ಮಣ್ಯ ಭಟ್, ಪ್ರ.ಕಾರ್ಯದರ್ಶಿ ರವಿ ನೀರ್ಚಾಲು, ಕೋಶಾಧಿಕಾರಿ ಪ್ರಶಾಂತ ಪೈ, ಉಪಾಧ್ಯಕ್ಷರುಗಳಾಗಿ ಸತ್ಯಶಂಕರ ಭಟ್, ನಾರಾಯಣ ಇ., ಜೊತೆಕಾರ್ಯದರ್ಶಿಯಾಗಿ ಗೋಪಾಲ ನಿತ್ಯಾನಂದ ಹಾಗೂ ಥೋಮಸ್ ಅಳಕ್ಕೆ, ವಿಶ್ವನಾಥ ಶರ್ಮ, ಶ್ಯಾಮ ಕುಮಾರ, ಕೆ.ಕೆ.ಇಬ್ರಾಹಿಂ, ಶಾಫಿ ಪಟ್ಲ ಮತ್ತು ರವಿಶಂಕರ ಪದಾಧಿಕಾರಿಗಳಾಗಿ ಆಯ್ಕೆಯಾದರು. ರವಿ ನೀರ್ಚಾಲ್ ಸ್ವಾಗತಿಸಿ, ಪ್ರಶಾಂತ್ ಪೈ ವಂದಿಸಿದರು.