ಉಪ್ಪಳ: ಮಂಜೇಶ್ವರ ಬಿ.ಆರ್.ಸಿ. ಮಟ್ಟದ ಮತ್ತು ಪೈವಳಿಕೆ ಗ್ರಾಮಪಂಚಾಯತಿ ಮಟ್ಟದ ಶಾಲಾ ಪ್ರವೇಶೋತ್ಸವ ಪೆರ್ಮುದೆ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜರುಗಿತು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಕಾರ್ಯಕ್ರಮ ಅಧಿಕಾರಿ ವಿಜಯಕುಮಾರ್ ಪಾವಳ, ಗ್ರಾಮ ಪಂಚಾಯತಿ ಸದಸ್ಯರಾದ ಎಂ.ಕೆ.ಅಮೀರ್, ಸುಬ್ರಹ್ಮಣ್ಯ ಭಟ್, ಶಾಲೆಯ ಪ್ರಬಂಧಕ ರವಿಶಂಕರ್,ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ, ರಕ್ಷಕ-ಶಿಕ್ಷಕ ಸಂಘದ, ಮಾತೃಸಂಘದ ಪದಾಧಿಕಾರಗಳು ಉಪಸ್ಥಿತರಿದ್ದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ಚೇತನ್ ಎಡಕ್ಕಾನ ಮತ್ತು ನೂತನ ಎಡಕ್ಕಾನ ಅವರನ್ನು ಅಭಿನಂದಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕ ಸದಾಶಿವ ಪೊಯ್ಯೆ ಸ್ವಾಗತಿಸಿ, ಶಿಕ್ಷಕಿ ಸ್ಮಿತಾ ಡೆಫ್ನಿ ಕಾರ್ಯಕ್ರಮ ನಿರೂಪಿಸಿದರು. ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಆರ್.ಸಿ. ಸಂಚಾಲಕಿ ಶಶಿಪ್ರಭಾ ವಂದಿಸಿದರು.
ಕಾರ್ಯಕ್ರಮ ಅಂಗವಾಗಿ ವರ್ಣರಂಜಿತ ಮೆರವಣಿಗೆ, ಪ್ರವೇಶೋತ್ಸವ ಗೀತೆ ಇತ್ಯಾದಿ ನಡೆದುವು.