ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಪತ್ನಿ ವಿರುದ್ಧ ಸರ್ಕಾರಿ ಹಣ ದುರ್ಬಳಕೆ ಮಾಡಿರುವ ಆರೋಪ ಸಾಬೀತಾಗಿದ್ದು, ಕೋರ್ಟ್ 15,000 ಡಾಲರ್ ಮೊತ್ತದ ದಂಡ ವಿಧಿಸಿದೆ.
ಜೆರುಸಲೇಮ್ ನ ಮ್ಯಾಜಿಸ್ಟ್ರೇಟ್ ಕೋರ್ಟ್ ಭಾನುವಾರ ಸಾರಾ ನೇತನ್ಯಾಹು ಅವರನ್ನು ಸರ್ಕಾರಿ ಹಣ ದುಂದುವೆಚ್ಚ ಮಾಡಿದ್ದ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ.
ಇದೇ ವೇಳೆ 100,000 ಡಾಲರ್ ಸರ್ಕಾರಿ ಹಣವನ್ನು ಐಷಾರಾಮಿ ಭೋಜನಕ್ಕಾಗಿ ದುಂದುವೆಚ್ಚ ಮಾಡಿರುವ ಆರೋಪವನ್ನು ಇತ್ಯರ್ಥಗೊಳಿಸಿಕೊಳ್ಳುವುದಕ್ಕೆ ಸಾರಾ ನೇತನ್ಯಾಹು ಮುಂದಾಗಿದ್ದು, ಅವರ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ.
ಇಸ್ರೇಲ್ ಸರ್ಕಾರಿ ಅಟಾರ್ನಿ ಕಚೇರಿ ಬೆಂಜಮಿನ್ ನೇತನ್ಯಾಹು ಪತ್ನಿ ಸಾರಾ ನೇತನ್ಯಾಹು ಪ್ರಕರಣ ಇತ್ಯರ್ಥಗೊಳಿಸಲು ಹೆಚ್ಚುವರಿ ಮೊತ್ತದ ದಂಡ ಪಾವತಿ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದೆ.
ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಪೂರ್ಣಾವಧಿ ಬಾಣಸಿಗರನ್ನು ನೇಮಿಸಿಕೊಂಡಿದ್ದರೂ ಐಷಾರಾಮಿ ರೆಸ್ಟೋರೆಂಟ್ ನಲ್ಲಿ ದುಂದುವೆಚ್ಚ ಮಾಡಿದ್ದಾರೆ ಎಂಬ ಆರೋಪ ಸಾರಾ ನೇತನ್ಯಾಹು ಆರೋಪಿಸಿದ್ದರು.