ಕುಂಬಳೆ: ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣಾ ಸಮಾರಂಭ ಇಂದು ಅಪರಾಹ್ನ 2.30 ರಿಂದ ನಡೆಯಲಿದೆ.
ಶಾಲಾ ವ್ಯವಸ್ಥಾಪಕ ಡಾ. ಕೆ.ವಿ.ತೇಜಸ್ವಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ವಿಶ್ವವಿಖ್ಯಾತ ಜಾದೂಗಾರ ಜೂನಿಯರ್ ಶಂಕರ್ ಉದ್ಘಾಟಿಸುವರು. ಜಿ.ಪಂ.ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬ್ಲಾ.ಪಂ.ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ, ಗ್ರಾ.ಪಂ.ಸದಸ್ಯ ಮುರಳೀಧರ ಯಾದವ್ ನಾಯ್ಕಾಪು, ತುಳು ಅಕಾಡೆಮಿ ಸದಸ್ಯ ರಾಜು ಸ್ಟೀಪನ್ ಕ್ರಾಸ್ತಾ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಐತ್ತಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.