ಬಿಶ್ಕೆಕ್: ಮಾಧ್ಯಮ ಕ್ಷೇತ್ರದಲ್ಲಿನ ಸಹಕಾರ ಒಪ್ಪಂದಕ್ಕೆ ಶಾಂಘೈ ಸಹಕಾರ ಸಂಘಟನೆ (ಎಸ್ ಸಿಒ) ಸದಸ್ಯ ರಾಷ್ಟ್ರಗಳು ಸಹಿ ಹಾಕುವ ಮೂಲಕ ಶೃಂಗಸಭೆ ನಿರ್ಣಯ ಕೈಗೊಂಡಿದೆ.
ಕಿರ್ಗಿಸ್ತಾನ ರಾಜಧಾನಿಯಲ್ಲಿ ಬಿಸ್ಕೆಕ್ ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್ ಸಿಒ) ಸದಸ್ಯರ ಸಮಾವೇಶದಲ್ಲಿ ಮಾಧ್ಯದ ಕ್ಷೇತ್ರದಲ್ಲಿ ಸಹಕಾರ ಒಪ್ಪಂದಕ್ಕೆ ಸದಸ್ಯ ರಾಷ್ಟ್ರಗಳು ಸಹಿ ಹಾಕಿವೆ ಎಂದು ರಷ್ಯಾದ ಸಾಮೂಹಿಕ ಸಂವಹನ ಸಚಿವಾಲಯ ತಿಳಿಸಿದೆ.
"ಪ್ರಮುಖವಾಗಿ ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳಲು ಲಾಭದಾಯಕ ಸ್ಥಿತಿಯ ಸೃಷ್ಟಿ ಹಾಗೂ ಸದಸ್ಯ ರಾಷ್ಟ್ರಗಳ ಸಂಪಾದಕೀಯ ಕಚೇರಿಗಳಲ್ಲಿ ಪರಸ್ಪರ ಸಹಕಾರ, ???ತ್ತಿಪರ ಅನುಭವದ ಹಂಚಿಕೆ, ಸಭೆ ನಡೆಸುವುದು, ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯಾಗಾರ ಮತ್ತು ಸಮ್ಮೇಳನಗಳು ಹಮ್ಮಿಕೊಳ್ಳುವುದು ಹಾಗೂ ಟಿವಿ ಪ್ರಸಾರ ಮತ್ತು ರೇಡಿಯೊ ಕಾರ್ಯಕ್ರಮಗಳಲ್ಲಿ ಪರಸ್ಪರ ಸಹಕಾರ ಇತ್ಯಾದಿ" ಎಂದು ಶುಕ್ರವಾರ ತಡರಾತ್ರಿ ಸಾಮೂಹಿಕ ಸಂವಹನ ಸಚಿವಾಲಯದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಶೃಂಗಸಭೆ ಸಮಾರೋಪ ಕಾರ್ಯಕ್ರಮದಲ್ಲಿ ರಷ್ಯಾದ ಸಂವಹನ ಇಲಾಖೆಯ ಉಪ ಸಚಿವ ಅಲೆಕ್ಸಾಂಡರ್ ವೊಲಿನ್ ಪಾಲ್ಗೊಂಡಿದ್ದರು.
ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಶನಿವಾರ ನವದೆಹಲಿಗೆ ವಾಪಸ್ ಆಗಿದ್ದಾರೆ.