ಕಾಸರಗೋಡು: ಸಂಜೆ ವೇಳೆ ಚಟುವಟಿಕೆ ನಡೆಸುವ ಗೂಡಂಗಡಿಗಳಲ್ಲಿ ಆಹಾರ ಸುರಕ್ಷೆ ಇಲಾಖೆಯ ಸಿಬ್ಬಂದಿ ಮಿಂಚಿನ ದಾಳಿ ನಡೆಸಿದರು.
ಮೊಗ್ರಾಲ್ ಪುತ್ತೂರು, ಉದುಮಾ, ಕಾ?ಂಗಾಡ್ ಪ್ರದೇಶಗಳ ಸುಮಾರು 50 ಗೂಡಂಗಡಿಗಳಿಗೆ ಈ ದಾಳಿನಡೆದಿದೆ.
ಜಿಲ್ಲೆಯ ವಿವಿಧೆಡೆಗಳಿಂದ ಲಭಿಸಿದ ದೂರುಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷೆ ಕಮೀಷನರ್ ಅವರ ಆದೇಶ ಪ್ರಕಾರ ಈ ದಾಳಿ ನಡೆದಲಾಗಿದೆ ಎಂದು ಸಿಬ್ಬಂದಿ ತಿಳಿಸಿದರು. ಬಹುತೇಕ ಗುಡಂಗಡಿಗಳಿಗೂ ಆಹಾರ ಸುರಕ್ಷೆ ನೋಂದಣಿ ಲಭಿಸಿಲ್ಲ, ವಾಹನಗಳ ಸಂಚಾರ ಪರಿಣಾಮ ಹೊಗೆ, ಧೂಳು ಇತ್ಯಾದಿಗಳು ಇವುಗಳ ಆಹಾರ ಪದಾರ್ಥಗಳ ಮೇರೆ ನೇರವಾಗಿಬೀಳುತ್ತಿವೆ, ನೊಣ ಇತ್ಯಾದಿಕಿಟಗಳಕಾಟವೂ ಇಂಥಾ ಕಡೆ ಇವೆ, ಸೂಕ್ತ ಸುರಕ್ಷಾ ಕ್ರಮನಡೆಸಿಲ್ಲ ಇತ್ಯಾದಿ ಸಂಬಂಧ ದೂರುಗಳು ಲಭಿಸಿದ್ದು, ತಪಾಸಣೆಗಳಲ್ಲೂ ಕೆಲವು ಕಡೆ ಈ ವಿಚಾರ ಪತ್ತೆಯಾಗಿದೆ ಎಂದು ಸಿಬ್ಬಂದಿ ತಿಳಿಸಿದರು. ಕೊಳಕು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ಇರಿಸಿರುವುದು, ಕಳಪೆ ಪಾತ್ರಗಳಲ್ಲಿ ಇರಿಸಿದ ಪರಿಣಾಮ ಎಣ್ಣೆ ತಿನಿಸುಗಳು ವಿಷಕಾರಿಯಗಿ ಪರಿವರ್ತನೆಗೊಂಡಿರುವುದು ಇತ್ಯಾದಿಗಳೂ ಪತ್ತೆಯಾಗಿವೆ ಎಂದು ಹೇಳಿದರು.
ಹಲವು ಬಾರಿ ಬಳಸಿದ ಎಣ್ಣೆಯಿಂದ ಮತ್ತೆ ಕರಿದ ತಿನಿಸುಗಳನ್ನು ಪತ್ತೆ ಮಾಡಿ ನಾಶಪಡಿಸಲಾಗಿದೆ. ಇಂಥಾ ಕೊರತೆಗಳನ್ನು ಶೀಘ್ರದಲ್ಲಿ ಪರಿಹರಿಸುವಂತೆ ಎಚ್ಚರಿಸಿ ಆಹಾರ ಸುರಕ್ಷೆ ಸಿಬ್ಬಂದಿ ಇಂಥಾ ಗೂಡಂಗಡಿ ಮಾಲೀಕರಿಗೆ ನೋಟೀಸು ನೀಡಿದ್ದಾರೆ. ಶುಚಿತ್ವವನ್ನು ಪಾಲಿಸುವ, ಆಹಾರ ಸುರಕ್ಷೆ ನಿಬಂಧನೆಗಳನ್ನು ಪಾಲಿಸುವ ರೀತಿ ವ್ಯಾಪಾರ ನಡೆಸುವಂತೆ ಅವರು ಆದೇಶ ನೀಡಿದ್ದಾರೆ. ತಪಾಸಣೆಗೆ ಸಹಕರಿಸದೇ ಇದ್ದ ಕೆಲವು ಗೂಡಂಗಡಿಯ ಮಂದಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದರು.
ಸುರಕ್ಷಿತವಲ್ಲದ ಆಹಾರ ಸೇವಸದಂತೆ ಜನತೆಗೆ ಅವರು ಜಾಗೃತಿ ತಿಳಿಸಿದ್ದಾರೆ.