ಉಪ್ಪಳ: ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳನ್ನು ಗುರುವಾರ ಉದ್ಘಾಟಿಸಿ ಚಾಲನೆ ನೀಡಲಾಯಿತು.
ಸಾಹಿತ್ಯ, ಸಮಾಜ ವಿಜ್ಞಾನ, ವಿಜ್ಞಾನ, ಗಣಿತ, ಕಂಪ್ಯೂಟರ್, ಕ್ರೀಡೆ, ಯೋಗ ಹಾಗೂ ಇಕೋಕ್ಲಬ್ ಗಳ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ವಾರಿಜಾ ಇವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಮಕ್ಕಳು ಉದ್ಘಾಟಿಸಲ್ಪಟ್ಟ ವಿವಿಧ ಕ್ಲಬ್ ಕಾರ್ಯಚಟುವಟಿಕೆಗಳ ವಿಷಯಗಳಿಗೆ ಸಂಬಂಧಿಸಿದ ವಿವಿಧ ಉಪಕರಣಗಳನ್ನು ಹಾಗೂ ಬರಹಗಳನ್ನು ಪ್ರದರ್ಶಿಸಿ ವಾರ್ಷಿಕ ಯೋಜನೆಯನ್ನು ಮಂಡಿಸಿದರು. ಶಿಕ್ಷಕರು, ಸಿಬ್ಬಂದಿಗಳು ಮಾರ್ಗದರ್ಶನ ನೀಡಿದರು.