HEALTH TIPS

ಇಂದು ಲೋಕಸಭೆಯಲ್ಲಿ ಹೊಸ ತ್ರಿವಳಿ ತಲಾಕ್ ಮಸೂದೆ ಮಂಡನೆ


     ನವದೆಹಲಿ: ತ್ರಿವಳಿ ತಲಾಕ್ ಪದ್ದತಿ ನಿಷೇಧಿಸಲು ಕುರಿತಂತೆ ಹೊಸ ಮಸುದೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಎನ್.ಡಿ.ಎ. ಸರ್ಕಾರ ಇಂದು(ಶುಕ್ರವಾರ) ಲೋಕಸಭೆಯಲ್ಲಿ ಮಂಡಿಸಲಿದೆ.
      ಲೋಕಸಭೆಯ ಕಾರ್ಯಸೂಚಿಯಲ್ಲಿ ಪಟ್ಟಿ ಮಾಡಲಾಗಿರುವ  ವಿಷಯಗಳಲ್ಲಿ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ಸಂರಕ್ಷಣೆ) ಮಸೂದೆ, 2019 ಇದ್ದು ಇದರಲ್ಲಿ ಈ ಹಿಂದಿನ ಎನ್ ಡಿಎ ಸರ್ಕಾರವು ಫೆಬ್ರವರಿಯಲ್ಲಿ ಹೊರಡಿಸಿದ ಸುಗ್ರೀವಾ ಜ್ಞೆ ಯನ್ನು ಮುರಿದು ಹೊಸ ಮಸೂದೆ ಮಂಡಿಸಲಿದೆ.
    ಕಳೆದ ಬಾರಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು ರಾಜ್ಯಸಬೆಯಲ್ಲಿ ಬಾಕಿ ಉಳಿದಿರುವಂತೆಯೇ 16 ನೇ ಲೋಕಸಭೆ ವಿಸರ್ಜನೆಯಾಗಿದ್ದ ಕಾರಣ ಆ ಮಸೂದೆ ತನ್ನ ಮೌಲ್ಯ ಕಳೆದುಕೊಂಡಿತ್ತು. ಇದೀಗ ಮತ್ತೆ ಮೋದಿ ಸರ್ಕಾರ ಹೊಸದಾಗಿ ತ್ರಿವಳಿ ತಲಾಕ್ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮಂಡನೆ ಮಾಡಬೇಕಿದೆ.
ತ್ವರಿತ ತ್ರಿವಳಿ ತಲಾಕ್ ಅಭ್ಯಾಸವನ್ನು ದಂಡನಾರ್ಹ ಅಪರಾಧವನ್ನಾಗಿ ಪರಿಗಣಿಸಲು ಪ್ರಸ್ತಾಪಿಸಿರುವ  ಈ ಮಸೂದೆಯು ವಿರೋಧ ಪಕ್ಷಗಳ ಆಕ್ಷೇಪಣೆಯನ್ನು ಎದುರಿಸಿದ್ದು, ತನ್ನ ಹೆಂಡತಿಯಿಂದ ವಿಚ್ಚೇದನ ಪಡೆದ ಮಾತ್ರಕ್ಕೆ ಒಬ್ಬನಿಗೆ ಜೈಲು ಶಿಕ್ಷೆ ವಿಧಿಸುವುದು ಕಾನೂನು ಸಮ್ಮತವಾಗಲಾರದು  ಎಂದು ವಾದಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries