ಕುಂಬಳೆ: ವಿಶ್ವ ತಂಬಾಕು ವಿರುದ್ದ ದಿನದ ಅಂಗವಾಗಿ ಕುಂಬಳೆ ಗ್ರಾ.ಪಂ. ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಹೊಗೆಬತ್ತಿ ನಿಷೇಧಿತ ಪ್ರದೇಶವಾಗಿ ಮಹತ್ತರ ತೀರ್ಮಾನದ ಘೋಷಣೆ ಮಾಡಲಾಯಿತು.
ಕುಂಬಳೆ ಜಿ.ಎಸ್.ಬಿ.ಎಸ್ ಶಾಲೆಯಲ್ಲಿ ಮೇ.31 ರಂದು ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಆರೋಗ್ಯ-ವಿದ್ಯಾಭ್ಯಾಸ ಸ್ಥಾಯೀ ಸಮಿತಿಯ ಅಧ್ಯಕ್ಷ ಎ.ಕೆ.ಆರೀಫ್ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಉದ್ಘಾಟಿಸಿದರು. ಹೊಗೆಬತ್ತಿ ನಿಷೇಧಿತ ಗ್ರಾ.ಪಂ. ಆಗಿರುವ ಬಗೆಗಿನ ಘೋಷಣೆಯನ್ನು ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ ಅವರು ನಿರ್ವಹಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ಗೀತಾ.ಎಲ್.ಶೆಟ್ಟಿ, ಬಿ.ಎನ್ ಮೊಹಮ್ಮದಾಲಿ, ಅರುಣ ಆಳ್ವ, ಸುಜಿತ್ ರೈ, ಮುರಳೀಧರ ಯಾದವ್ ನಾಯ್ಕಾಪು, ಹರೀಶ್ ಶೆಟ್ಟಿ, ಪ್ರೇಮಲತಾ, ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜಿನಿ, ಅಬಕಾರಿ ಅಧಿಕಾರಿ ಬಾಲಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ ಶುಭಾಶಂಸನೆಗೈದರು. ವೈದ್ಯಾಧಿಕಾರಿ ಡಾ.ದಿವಾಕರ ರೈ, ಗ್ರಾ.ಪಂ. ಕಾರ್ಯದರ್ಶಿ ಜಯನ್ ಮಾಹಿತಿ ತರಗತಿ ನಡೆಸಿದರು. ಸಹಾಯಕ ಕಾರ್ಯದರ್ಶಿ ಶೈನ್ ಕುಮಾರ್ ಸ್ವಾಗತಿಸಿ, ಆರೋಗ್ಯ ಪರಿವೀಕ್ಷಕ ಚಂದ್ರನ್ ವಂದಿಸಿದರು. ಕುಟುಂಬಶ್ರೀ ಕಾರ್ಯಕರ್ತೇಯರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.