ಮುಳ್ಳೇರಿಯ: ಪ್ರಸಕ್ತ ಸಾಲಿನ ಶಾಲಾ ಪ್ರವೇಶೋತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮ ಇಂದು(ಜೂ.5) ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಮೂರನೇ ವರ್ಷಾಚರಣೆಯ ಅಂಗವಾಗಿಯೂ ಈ ನೂತನ ಶಿಕ್ಷಣ ವರ್ಷದ ಆರಂಭ ಕಾರ್ಯಕ್ರಮ ನಡೆಯಲಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ಶಾಸಕ ಕೆ.ಕುಞÂರಾಮನ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿ ಭಾಗವಹಿಸುವರು. ನೂತನವಾಗಿ ಶಾಲೆಗೆ ಆಗಮಿಸುವ ಚಿಣ್ಣರನ್ನು ವರ್ಣರಂಜಿತ ಕಾರ್ಯಕ್ರಮಗಳೊಂದಿಗೆ, ಕೊಡುಗೆಗಳ, ಸಿಹಿ ನೀಡಿಕೆ ಸಹಿತ ಸ್ವಾಗತಿಸಲಾಗುವುದು.
ಒಂದನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳನ್ನು ಜೊತೆಗೂಡಿಸಿ ಈ ಬಾರಿಯ ಪ್ರವೇಶೋತ್ಸವ ನಡೆಸಲಾಗುವುದು ಎಂದು ಜಿಲ್ಲಾ ಶಿಕ್ಷಣ ಸಮಿತಿ ಸಭೆ ತಿಳಿಸಿದೆ.