HEALTH TIPS

ತಾಯಿಯ ಪುನರ್ ವಿವಾಹಕ್ಕೆ ಶುಭಕೋರಿದ ಪುತ್ರ-ಫೇಸ್ ಬುಕ್ ಪೋಸ್ಟ್ ವೈರಲ್!

     
        ಕೊಲ್ಲಂ: ದೇಶದಲ್ಲಿ ಪುನರ್‍ವಿವಾಹ ಕುರಿತಂತೆ ತುಚ್ಛ ಭಾವ, ಅಸಹ್ಯ, ಸಂದೇಹದಿಂದ ನೋಡಲಾಗುತ್ತದೆ. ಆದರೆ ಇಲ್ಲೊಬ್ಬ ಮಗ ತನ್ನ ತಾಯಿ ಪುನರ್‍ವಿವಾಹವಾಗಿದ್ದಕ್ಕೆ ಶುಭಾಶಯ ಕೋರಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು ಈ ಪೋಸ್ಟ್ ಇದೀಗ ವೈರಲ್ ಆಗಿದೆ.
    ಕೊಲ್ಲಂ ಜಿಲ್ಲೆಯ 23 ವರ್ಷದ ಗೋಕುಲ್ ಶ್ರೀಧರ್ ಎಂಬಾತ ಅಮ್ಮನ ಪುನರ್‍ವಿವಾಹಕ್ಕೆ ಶುಭಾಶಯ ಕೋರಿದ್ದು ಅದರ ಕೆಳಗೆ ತನ್ನ ಅಮ್ಮನ ತ್ಯಾಗದ ಬಗ್ಗೆ ನೆನೆದು ಬರೆದುಕೊಂಡಿದ್ದಾರೆ.
       ಗೋಕುಲ್ ಫೇಸ್ ಬುಕ್ ಪೋಸ್ಟ್ ಬರಹದಲ್ಲಿ ಏನಿದೆ?
    ನನ್ನನ್ನು ಹೆತ್ತು, ನನಗಾಗಿ ಜೀವನ ಸಾಗಿಸಿ, ನನ್ನ ಯಶಸ್ಸಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ನನ್ನ ತಾಯಿಗೆ ಏನೆಂದು ಹೇಳಲಿ. ಅವಳು ಮೊದಲ ಮದುವೆಯಿಂದ ಸಾಕಷ್ಟು ನೋವುಂಡಿದ್ದಳು. ಗಂಡನಿಂದ ಒಡೆಸಿಕೊಂಡು ತಲೆಯಿಂದ ರಕ್ತ ಸೋರುತ್ತಿದ್ದಾಗ ನಾನು ಆಕೆಯನ್ನು ಕೇಳಿದ್ದೆ. ಯಾಕೆ ಇದನೆಲ್ಲಾ ಯಾಕೆ ಸಹಿಸಿಕೊಳ್ಳುತ್ತಿದ್ದೀಯಾ? ಅದಕ್ಕೆ ಅಮ್ಮ ನಿನಗಾಗಿ ನಾನು ಬದುಕುತ್ತಿದ್ದೇನೆ. ನಾನು ಇದನ್ನು ಸಹಿಸಿಕೊಳ್ಳುತ್ತಿರುವುದು ಎಂದು ಹೇಳಿದ್ದಳು.
       ನನ್ನ ತಾಯಿ ಗಂಡನನ್ನು ಬಿಟ್ಟು ಹೊರಬಂದಾಂಗ ನನಗೆ 10ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ತಾಯಿ ಶಿಕ್ಷಕಿಯಾಗಿದ್ದರು. ಈಗ ಅಮ್ಮ ಕೆಲಸ ಬಿಟ್ಟಿದ್ದಾರೆ. ಇನ್ನು ನಾನು ಕೆಲಸದ ನೆಪದಲ್ಲಿ ದೂರ ಹೋದರೆ ಅಮ್ಮ ಒಬ್ಬಂಟಿಯಾಗುತ್ತಾಳೆ. ಹಾಗಾಗಿ ನಾನು ಪುನರ್‍ವಿವಾಹದ ಬಗ್ಗೆ ತಾಯಿಗೆ ಹೇಳುತ್ತಿದ್ದೆ. ಅಮ್ಮ ಬೇಡ ಅನ್ನುತ್ತಿದ್ದಳು. ಆಕೆಯ ಸಹೋದ್ಯೋಗಿಗಳ ಕಡೆಯಿಂದಲೇ ಈ ವಿವಾಹ ಸಂಬಂಧ ಬಂದಿತ್ತು. ಆಕೆ ಮೊದಲು ಬೇಡ ಎಂದು ನಿರಾಕರಿಸಿದ್ದರೂ ನಂತರ ಒಪ್ಪಿಕೊಂಡಳು ಎಂದಿದ್ದಾರೆ.
      ಫೇಸ್ ಬುಕ್ ಪೋಸ್ಟ್ ನ ಮೂಲ ಮಲೆಯಾಳ ಸಂದೇಶ:
    അമ്മയുടെ വിവാഹമായിരുന്നു.
ഇങ്ങനെ ഒരു കുറിപ്പ് വേണോ എന്ന് ഒരുപാട് ആലോചിച്ചതാണ്, രണ്ടാം വിവാഹം ഇപ്പോഴും അംഗീകരിക്കാൻ പറ്റാത്ത ആളുകൾ ഉള്ള കാലമാണ്.
സംശയത്തിന്റെയും പുച്ഛത്തിന്റെയും വെറുപ്പിന്റെയും കണ്ണുകൾകൊണ്ട് ആരും ഇങ്ങോട്ട് നോക്കരുത്, അങ്ങനെ നോക്കിയാൽ തന്നെ ഇവിടെ ആരും ചൂളി പോകില്ല..
ജീവിതം മുഴുവൻ എനിക്ക് വേണ്ടി മാറ്റിവെച്ച ഒരു സ്ത്രീ.ദുരന്തമായ ദാമ്പത്യത്തിൽ ഒരുപാട് അനുഭവിച്ചിട്ടുണ്ട്, അടികൊണ്ട് നെറ്റിയിൽ നിന്ന് ചോരയൊലിക്കുമ്പോൾ ഞാൻ ചോദിച്ചിട്ടുണ്ട് എന്തിന് ഇങ്ങനെ സഹിക്കുന്നു എന്ന്?,അന്ന് അമ്മ പറഞ്ഞത് ഓർമ്മയുണ്ട് നിനക്ക് വേണ്ടിയാണ് ഞാൻ ജീവിക്കുന്നത്,ഇനിയും സഹിക്കുമെന്ന്.
അന്ന് ആ വീട്ടിൽ നിന്ന് അമ്മയുടെ കൈപിടിച്ചിറങ്ങിയപ്പോ ഞാൻ തീരുമാനം എടുത്തതാണ് ഈ നിമിഷത്തെ കുറിച്ച്, ഇത് നടത്തുമെന്ന്...
യൗവനം മുഴുവൻ എനിക്കായി മാറ്റിവെച്ച എന്റെ അമ്മക്ക് ഒരുപാട് സ്വപ്നങ്ങളും ഉയരങ്ങളും കീഴടക്കാൻ ഉണ്ട്....കൂടുതൽ ഒന്നും പറയാൻ ആഗ്രഹിക്കുന്നില്ല, ഇങ്ങനെ ഒരു കാര്യം നടന്നത് രഹസ്യമായി വെക്കേണ്ട ആവശ്യമില്ല എന്ന് തോന്നി..
അമ്മ💜 Happy Married Life..

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries