ಉಪ್ಪಳ: ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರದ 3ನೇ ವರ್ಷದ ಭಜನೋತ್ಸವ ಹಾಗೂ 36ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ ಆ. 31ರಿಂದ ಸೆ. 3ರ ತನಕ ವಿವಿಧ ಧಾರ್ಮಿಕ, ವೈಧಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಆ. 31ರಂದು ಸೂರ್ಯೋದಯದಿಂದ ಸೂರ್ಯಾಹಸ್ತದವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಯಂ.ಕೆ ಅಶೋಕ್ ಕುಮಾರ್ ಹೊಳ್ಳ ದೀಪ ಪ್ರಜ್ವಲನೆ ನಡೆಸುವರು. ಸಂಜೆ 6.41ಕ್ಕೆ ಭಜನಾ ಮಂಗಳೋತ್ಸವ, ರಾತ್ರಿ 6.45ರಿಂದ ದುರ್ಗಾನಮಸ್ಕಾರ ಪೂಜೆ, 8ರಿಂದ ಶಿವಶಕ್ತಿ ಕ್ರಿಕೆಟರ್ಸ್ ಪ್ರತಾಪನಗರ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಸೆ.1ರಂದು ಬೆಳಿಗ್ಗೆ 7ಕ್ಕೆ ದ್ವಜಾರೋಹಣ, 7.30ಕ್ಕೆ ಗಣಪತಿ ಪ್ರತಿಷ್ಠೆ, 8ಕ್ಕೆ ಪ್ರತಿಷ್ಠಾ ಪೂಜೆ, ಗಣಹೋಮ, 9ರಿಂದ 10ರತನಕ ಭಜನೆ, 10ರಿಂದ ಗೌರೀ ಪೂಜೆ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಧ್ಯಾಹ್ನ 12.30ರಿಂದ ಶ್ರೀ ಗೌರೀ ಗಣೇಶ ಮಹಿಳಾ ಸಂಘ ಪ್ರತಾಪನಗರ ಇವರಿಂದ ಯಕ್ಷಗಾನ ತಾಳಮದ್ದಳೆ, 1ಕ್ಕೆ ಅನ್ನಸಂತರ್ಪಣೆ, ಸಂಜೆ 5ರಿಂದ 6.45ರತನಕ ಭಜನೆ, 6.45ರಿಂದ 7ರತನಕ ಮಹಾ ತಿರುವಾದಿರಕಳಿ, ರಾತ್ರಿ 7.15ರಿಂದ 8.15ರತನಕ ಮಿತ್ರ ವೃಂದ ಪ್ರತಾಪನಗರ ಮತ್ತು ಶ್ರೀರಾಮ ಬಾಲಗೋಕುಲ ಪ್ರತಾಪನಗರ ಇವರಿಂದ ನೃತ್ಯ ಕಾರ್ಯಕ್ರಮ, 8.30ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆಯನ್ನು ಮುಂಬಯಿ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ವಹಿಸುವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಮಂಗಳೂರು ಗ್ರಾಮಾಂತರ ಜಿಲ್ಲಾ ಗ್ರಾಮ ವಿಕಾಸ ಪ್ರಮುಖ್ ಅಧ್ಯಾಪಕ ಶ್ರೀಧರ ಭಟ್ ಕುದಿಂಗಲ ಧಾರ್ಮಿಕ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಡಾ.ನವೀನ್ ಕುಮಾರ್ ವಿಟ್ಲ, ಸುಕುಮಾರ್ ಯು, ದುಗ್ಗಪ್ಪ ಶೆಟ್ಟಿ ತಿಂಬರ, ಬಾಲಕೃಷ್ಣ ಶೆಟ್ಟಿ ಮೀನಾರು, ಗೋಪಾಲ.ಪಿ, ಬಾಲಕೃಷ್ಣ.ಸಿ.ಅಂಬಾರು, ವಲ್ಸರಾಜ್.ಕೆ.ಪಿ ಮೊದಲಾದ ಗಣ್ಯರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ವಾಸ್ತು ಶಿಲ್ಪಿ ಪದ್ಮನಾಭ ಆಚಾರ್ಯ ಸೀತಾಂಗೋಳಿ ಇವರಿಗೆ ಗೌರವಾರ್ಪಣೆ ಮಾಡಲಾಗುವುದು ಹಾಗೂ ಪ್ರತಾಪನಗರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಬಳಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ರಾತ್ರಿ 10ಕ್ಕೆ ವಿಶೇಷ ಹೂವಿನ ಪೂಜೆ, 10.15ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 10.30ರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ. ಸೆ.2ರಂದು ಬೆಳಿಗ್ಗೆ 7ಕ್ಕೆ ಪ್ರಾತ ಪೂಜೆ, 9.30ಕ್ಕೆ ಗಣಹೋಮ, 9.30ರಿಂದ 12.30ರತನಕ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಭಕ್ತಿ ಭಾವ ಸಂಗಮ ಕಾರ್ಯಕ್ರಮ, ಸಂಜೆ 3.30ರಿಂದ 6.30ರತನಕ ಭಜನೆ, 6.30ಕ್ಕೆ ವಿಶೇಷ ಹರಕೆಯ ರಂಗಪೂಜೆ, ರಾತ್ರಿ 7.30ರಿಂದ 9ರತನಕ ಶ್ರೀ ಗೌರೀ ಗಣೇಶ ಮಹಿಳಾ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ, 9ರಿಂದ ಟೀಮ್ ಮಜ್ಜೆಯವರಿಂದ ಕಲಾ ಸಂಭ್ರಮ, ರಾತ್ರಿ 10ಕ್ಕೆ ರಂಗಪೂಜೆ, 10.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. 3ರಂದು ಬೆಳಿಗ್ಗೆ 7ಕ್ಕೆ ಪ್ರಾತ ಪೂಜೆ, 7.30ಕ್ಕೆ ಭುವನೇಶ್ವರೀ ಪೂಜೆ ಮತ್ತು ಅಗ್ನಿ ಜನನ ಸಹಿತ 108 ಕಾಯಿಗಳ ಗಣಯಾಗ, 9ರಿಂದ 11ರತನಕ ಭಜನೆ, 11ಕ್ಕೆ ಗಣಹೋಮ ಪೂರ್ಣಾಹುತಿ, 11.30ಕ್ಕೆ ಅಶ್ವತ್ಥ ಪೂಜೆ, 11.30ರಿಂದ 12.30ರ ತನಕ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, 1.30ಕ್ಕೆ ಉತ್ತರಪೂಜೆ, ಧ್ವಜಾವತರಣ, ವಿಸರ್ಜನಾ ಶೋಭಾಯಾತ್ರೆ, ಈ ವೇಳೆ ಟೀಮ್ ಮಜ್ಜೆ ಸಂಸ್ಥೆ ಇವರಿಂದ ಭಕ್ತಿಗಾನ ವೈಭ ನಡೆಯಲಿದೆ.