ಪೆಲ9: ತುಳುನಾಡ ಜೀವನ ಪದ್ಧತಿಯಲ್ಲಿ ಪ್ರಾಕೃತಿಕ ಆಚರಣೆಗಳು ಜೀವಂತಿಕೆಯನ್ನು ಪಡೆದಿರುವುದರಿಂದಲೇ ಇಲ್ಲಿ ಸಾಕಷ್ಟು ಅಧ್ಯಯನಗಳು ನಡೆಯುತ್ತಿದೆ. ಆಟಿ ತಿಂಗಳು ಹಸಿವಿನ ಮೌಲ್ಯವನ್ನು ಕಲಿಸಿದ ತಿಂಗಳಾದರೆ ತಾಳ್ಮೆಯ ಮನೋಭಾವವನ್ನು ಬೆಳೆಸುತ್ತದೆ. ಆಟಿ ತಿಂಗಳಲ್ಲಿ ಸೇವಿಸುವ ಪ್ರಕೃತಿದತ್ತ ತಿನಿಸುಗಳು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎನ್ನುವುದಕ್ಕೆ ಹಿರಿಯರ ಆರೋಗ್ಯದಾಯಕ ಜೀವನವೇ ಸಾಕ್ಷಿಯಾಗಿದೆ ಎಂದು ಯಕ್ಷಗಾನ ಕಲಾವಿದ ಸುಂದರ ಅಪ್ಪಯ್ಯಮೂಲೆ ತಿಳಿಸಿದರು.
ಪೆಲ9 ನೇತಾಜಿ ಸಾವ9ಜನಿಕ ಗ್ರಂಥಾಲಯ ಆಯೋಜಿಸಿದ ಆಟಿಕೂಟ ಕಾಯ9ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಟುಕುಕ್ಕೆ ಎಸ್ ಎಸ್ ಹೈಯರ್ ಸೆಕೆಂಡರಿ ಶಾಲಾ ಪ್ರಬಂಧಕ ಪುರುಷೋತ್ತಮ ಭಟ್ ಮಿತ್ತೂರು ಅವರು ಮುಖ್ಯ ಅತಿಥಿಯಾಗಿ ಆಟಿ ತಿಂಗಳ ಜೀವನ ಶೈಲಿಯ ನೆನಪನ್ನು ಹೊಸ ತಲೆಮಾರಿಗೆ ಪರಿಚಯಿಸುವ ಗ್ರಂಥಾಲಯದ ಈ ಆಟಿಕೂಟ ಕಾಯ9ಕ್ರಮ ಪ್ರಶಂಸನೀಯ ಎಂದು ತಿಳಿಸಿದರು. ಗ್ರಂಥಾಲಯ ಅಧ್ಯಕ್ಷ ರಾಮಕೃಷ್ಣ ರೈ.ಕುದ್ವ ಅಧ್ಯಕ್ಷತೆ ವಹಿಸಿದ್ದರು. ಫೈಸಲ್ ಮಾಸ್ತರ್ ನಲ್ಕ, ಮಣಿಕಂಠ ಪೆಲ9, ಸಂಜೀವ ಮಾಸ್ತರ್ ಸಿ.ಯಚ್, ರಾಜೇಶ್ ಉಪಸ್ಥಿತರಿದ್ದರು. ಕಾಯ9ದಶಿ9 ಉದಯ ಸಾರಂಗ ಸ್ವಾಗತಿಸಿ, ಕಾಯ9ಕಾರಿ ಸಮಿತಿ ಸದಸ್ಯೆ ಸಚಿತಾ ರೈ ವಂದಿಸಿದರು.