HEALTH TIPS

ಅಗಲಿದ ಏರ್ಯ ಲಕ್ಷ್ಮೀನಾರಾಯಣ ಆಳ್ವರಿಗೆ ಜಾನಪದ ಪರಿಷತ್ತಿನಿಂದ ಕುಂಬಳೆಯಲ್ಲಿ ನುಡಿ ನಮನ

 
          ಕುಂಬಳೆ: ಅಗಾಧ ಜ್ಞಾನ ಕಾಶಿಯ, ಸರಳ ವ್ಯಕ್ತಿತ್ವದ ಏರ್ಯ ಲಕ್ಷ್ಮೀನಾರಾಯಣ  ಆಳ್ವರ ಸಮಗ್ರ ಜೀವನ ಅಪೂರ್ವವಾಗಿ ಕರಾವಳಿಯ ಮಹತ್ವದ ಗರಿಮೆಗಳಿಗೆ ಹೆಮ್ಮೆ ತಂದಿತ್ತಿದೆ. ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ತಿಳಿಸಿದರು.
        ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಸೋಮವಾರ ಕುಂಬಳೆಯ ಮಾಧವ ಪೈ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ನಿಧನದ ಹಿನ್ನೆಲೆಯಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿ ಅವರು ಮಾತನಾಡಿದರು.
       ಜಾನಪದ ಪರಿಷತ್ತಿನ ಸ್ಥಾಪಕರಾಗಿದ್ದ ಎಚ್.ಎಲ್.ನಾಗೇಗೌಡರೊಂದಿಗಿನ ಒಡನಾಟವು ಏರ್ಯರ ಅಪಾರ ಜಾನಪದೀಯ ಅರಿವಿನ ದ್ಯೋತಕವಾಗಿದೆ.ಈ ಕಾರಣದಿಂದ ಜಾನಪದ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಕರ್ನಾಟಕದ ವಿವಿಧೆಡೆ ಅದರ ವಿವಿಧ ಘಟಕಗಳ ರೂಪೀಕರಣಕ್ಕೆ ಕಾರಣರಾಗಿದ್ದ ಅವರು ಸಾಹಿತ್ಯ, ಸಾಮಾಜಿಕ, ರಾಜಕೀಯ, ಸಹಕಾರಿ, ಕಲಾಕ್ಷೇತ್ರ ಮೊದಲಾದ ವೈವಿಧ್ಯಮಯ ಆಯಾಮಗಳಲ್ಲಿ ತಮ್ಮದೇ ಕೊಡುಗೆಗಳ ಮೂಲಕ ವಿಶಿಷ್ಟ ಛಾಪು ಮೂಡಿಸಿದವರಾಗಿದ್ದಾರೆ.ವರ ಅಗಲುವಿಕೆಯ ನಷ್ಟ ಭರಿಸಲಾರದಷ್ಟು ಆಳವಾದುದು ಎಂದು ಈ ಸಂದರ್ಭ ತಿಳಿಸಿ, ಅವರೊಂದಿಗಿನ ಸಂಪರ್ಕದ ಬಗ್ಗೆ ನೆನಪಿಸಿದರು.
      ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಮಾಜಿಕ-ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ ಅವರು ಮಾತನಾಡಿ, ಏರ್ಯ ಅವರು ವಿಹಿಂಪ ಸಂಘಟನೆ ಬಗ್ಗೆ ನಿರ್ವಹಿಸಿದ ಸೇವೆಯ ಬಗ್ಗೆ ನೆನಪಿಸಿ ನುಡಿನಮನ ಸಲ್ಲಿಸಿದರು. ಸಾಹಿತಿ, ನಿರ್ವರ್ತ ಶಿಕ್ಷಕ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರು ಏರ್ಯ ಅವರ ಸಾಹಿತ್ಯ ಸೇವೆಯ ಬಗ್ಗೆ ಮಾತನಾಡಿದರು. ಕವಿ, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಮಾತನಾಡಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಗಡಿನಾಡು ಕಾಸರಗೋಡಿನೊಂದಿಗಿನ ನಿಕಟ ಸಂಪರ್ಕವನ್ನು ನೆನಪಿಸಿ ಜಿಲ್ಲಾ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿ, ಕವಿ ಕಯ್ಯಾರರೊಂದಿಗೆ, ಭಾಷಾಂತರಕಾರ ಎ.ನರಸಿಂಹ ಭಟ್ ಅವರೊಂದಿಗಿನ ನಿಕಟ ಒಡನಾಟದ ಬಗ್ಗೆ ತಿಳಿಸಿದರು.
      ಗಮಕ ಕಲಾ ಸಾಹಿತ್ಯ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಟಿ.ಶಂಕರನಾರಾಯಣ ಭಟ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕದ ಅಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ತಾಲೂಕು ಘಟಕಾಧ್ಯಕ್ಷ ಸಂಜೀವ ಕರ್ಕೇರ, ಕರ್ನಾಟಕ ಜಾನಪದ ಪರಿಷತ್ತು ಸಲಹಾ ಸಮಿತಿ ಸದಸ್ಯ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಯಕ್ಷಗಾನ ಗುರು ಪಡುಮಲೆ ಜಯರಾಮ ಪಾಟಾಳಿ, ಗಝಲ್ ಸಾಹಿತಿ, ಸಾಹಿತ್ಯ ವಿಮರ್ಶಕಿ ಚೇತನಾ ಕುಂಬಳೆ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಖಜಾಂಜಿ ರವಿ.ನಾಯ್ಕಾಪು, ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದು ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಬಹುಮುಖ ವ್ಯಕ್ತಿತ್ವವವನ್ನು ನೆನಪಿಸಿ ನುಡಿ ನಮನ ಸಲ್ಲಿಸಿದರು. ವೇಣುಗೋಪಾಲ ಶೆಟ್ಟಿ ಕಿನ್ನಿಮಜಲು, ಉಮೇಶ್ ಚೌಟ ಹಳೆಮನೆ, ಸುಚೀಂದ್ರನಾಥ ಕುಂಬಳೆ, ಜಯರಾಜ್ ಗಟ್ಟಿ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಟ್ ಕೆ.ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪೃಥ್ವಿರಾಜ್ ಶೆಟ್ಟಿ ಉಜಾರು ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries