ಕುಂಬಳೆ: ಇತ್ತೀಚಿಗೆ ವಿದ್ಯುತ್ ಆಘಾತದಿಂದ ಮೃತಪಟ್ಟ ಕುಂಬಳೆ ಶೇಡಿಕಾವು ನಿವಾಸಿಯಾದ ಕಲಾವತಿ ಕಾರಂತ ಅವರ ಕುಟುಂಬಕ್ಕೆ ಕಾಸರಗೋಡು ವಿದ್ಯುತ್ ಇಲಾಖೆಯ ಸಹಾಯಕ ಅಭಿಯಂತರ ನಾಗರಾಜ್ ಭಟ್ ಅವರು ಕುಂಬಳೆ ಪಂಚಾಯತ್ ಸದಸ್ಯ ಕೆ.ರಮೇಶ್ ಭಟ್ ಅವರ ಸಮ್ಮುಖದಲ್ಲಿ ಮೃತರ ಹಿರಿಯ ಮಗಳಾದ ಚೈತ್ರ ಅವರಿಗೆ ತುರ್ತು ಪರಿಹಾರವಾಗಿ 2 ಲಕ್ಷ ರೂ. ಚೆಕ್ ಅನ್ನು ಶನಿವಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿದ್ಯುತ್ ಇಲಾಖೆಯ ಇನ್ನೋರ್ವ ಸಹಾಯಕ ಅಭಿಯಂತರ ಸುದೀಪ್ ಅವರು ಉಪಸ್ಥಿತರಿದ್ದರು. ಮೃತರ ಮಕ್ಕಳಾದ ಚಿತ್ರ ಹಾಗು ಪವಿತ್ರ ಜೊತೆಯಲ್ಲಿದ್ದರು.
ವಿದ್ಯುತ್ ಆಘಾತದಿಂದ ಮೃತ ಕುಟುಂಬ ಸದಸ್ಯರಿಗೆ ನೆರವು ಹಸ್ತಾಂತರ
0
ಜುಲೈ 27, 2019