ಬದಿಯಡ್ಕ: ನೀರ್ಚಾಲು ಸಮೀಪದ ಕನ್ಯಪ್ಪಾಡಿಯಲ್ಲಿ ಸಹೋದರರು ಮೃತಪಟ್ಟಿರುವುದು ಮಿಲಿಯೋಡಿಯೋಸಿಸ್ ಸೋಂಕಿನಿಂದ ಎಂದು ಖಚಿತಪಡಿಸಿದೆ.
ಮಣಿಪಾಲ್ ವೈರೋಲಾಜಿ ಇನ್‍ಸ್ಟಿಟ್ಯೂಟ್‍ನಲ್ಲಿ ನಡೆಸಿದ ರಕ್ತ ತಪಾಸಣೆಯಲ್ಲಿ ಈ ಸೋಂಕು ದೃಢಪಟ್ಟಿದ್ದು, ಕಲುಷಿತ ನೀರು ಮತ್ತು ಕಲುಷಿತ ಆಹಾರ ಸೇವನೆಯೇ ರೋಗ ಹರಡಲು ಕಾರಣವೆಂದು ತಿಳಿಯಲಾಗಿದೆ.
ಕನ್ಯಪ್ಪಾಡಿಯ ಸಿದ್ಧಿಖ್‍ನ ಮಕ್ಕಳಿಬ್ಬರು ಗಂಟೆಗಳ ಅಂತರದಲ್ಲಿ ಜ್ವರ ಬಾಧಿಸಿ ಚಿಕಿತ್ಸೆಯಲ್ಲಿಯೇ ಮೃತಪಟ್ಟಿದ್ದರು. ಆರಂಭದಲ್ಲಿ ಸಾವಿಗೆ ಕಾರಣವನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ. ವೈರಸ್‍ನಿಂದ ಸಾವು ಉಂಟಾಗಿಲ್ಲ ಎಂದು ತಿಳಿದು ಬಂದಿದ್ದರೂ, ಸಾವಿಗೆ ನಿಖರ ಕಾರಣ ತಿಳಿದು ಬಂದಿರಲಿಲ್ಲ.
ಮಣಿಪಾಲದ ವೈರೋಲಾಜಿ ಇನ್‍ಸ್ಟಿಟ್ಯೂಟ್ ನಡೆಸಿದ ರಕ್ತ ಮಾದರಿ ಪರಿಶೀಲನೆಯಲ್ಲಿ ಮಿಲಿಯೋಡಿಯೋಸಿಸ್ ಎಂದು ತಿಳಿದು ಬಂದಿದೆ. ಕಲುಷಿತ ನೀರು ಅಥವಾ ಬ್ಯಾಕ್ಟೀರಿಯಾದಿಂದ ಬರುವ ಸೋಂಕು ಮಿಲಿಯೋಡಿಯೋಸಿಸ್ ರೋಗವಾಗಿದೆ. ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಕಟ್ಟಿನಿಲ್ಲುವಲ್ಲಿ ಈ ವೈರಸ್ ಉತ್ಪತ್ತಿಯಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಮಳೆಗಾಲದಲ್ಲಿ ಈ ವೈರಸ್ ಹುಟ್ಟಿಕೊಂಡು ರೋಗ ಹಡುವ ಸಾಧ್ಯತೆಗಳು ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ.
ರೋಗನಿರೋಧಕ ಶಕ್ತಿ ಕಡಿಮೆಯಿರುವ ಮಕ್ಕಳು, ವೃದ್ಧರು, ಗರ್ಭಿಣಿಯರು ಈ ಕಾಯಿಲೆಗೆ ಹೆಚ್ಚು ಒಳಗಾಗುತ್ತಾರೆ. ಚಿಕಿತ್ಸೆ ತಡವಾದರೆ ಸಾವಿನ ಅಪಾಯ ಹೆಚ್ಚಾಗಿದೆ. ಮೃತ ಮಕ್ಕಳನ್ನು ನೋಡಿಕೊಂಡ ಪೆÇೀಷಕರು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ರೋಗದ ಮೂಲವನ್ನು ಪತ್ತೆ ಹಚ್ಚಲು ಪರಿಶೋಧನೆ ಮುಂದುವರಿಸುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.