ಮುಳ್ಳೇರಿಯ: ಮಾನವ ಮೊತ್ತಮೊದಲು ಚಂದ್ರನ ನೆಲಕ್ಕೆ ಕಾಲಿರಿಸಿದ ಸವಿ ನೆನಪಿಗೆ ಜು.21ರಂದು ಚಾಂದ್ರದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಬೆಳ್ಳೂರು ಹೈಯರ್ ಸೆಕೆಂಡರಿ ಶಾಲೆಯ ವಿಜ್ಞಾನ ಸಂಘ ಸಂಚಾಲಕ, ವಿಜ್ಞಾನ ಶಿಕ್ಷಕ ಜಿಸನ್ ಹೇಳಿದರು.
ಚಾಂದ್ರ ದಿನಾಚರಣೆ ಅಂಗವಾಗಿ ಬೆಳ್ಳೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು.
ಅಮೇರಿಕದ ವಿಜ್ಞಾನಿಗಳಾದ ನೀಲ್ ಆರ್ಮ್‍ಸ್ಟ್ರಾಂಗ್, ಎಡ್ವಿನ್ ಅಲ್ಡ್ರಿನ್, ಮೈಕಲ್ ಕೋಲಿನ್ಸ್ ಬಾಹ್ಯಾಕಾಶ ಸಂಚಾರಿಗಳು ಅಪೆÇೀಲೋ 11 ಎಂಬ ಬಾಹ್ಯಾಕಾಶ ವಾಹನದಲ್ಲಿ 1969 ಜುಲೈ 20 ರಂದು ಚಂದ್ರನಲ್ಲಿಗೆ ತಲಪಿದರು.ಜುಲೈ 21ರಂದು ಆರ್ಮ್‍ಸ್ಟ್ರಾಂಗ್ ಚಂದ್ರನ ನೆಲದಲ್ಲಿ ಮೊತ್ತ ಮೊದಲು ಕಾಲಿರಿಸಿದ ಖ್ಯಾತಿ ಪಡೆದಿದ್ದಾರೆ. ಎಡ್ವಿನ್ ಅಲ್ಡ್ರಿನ್ ಎರಡನೆಯದಾಗಿ ಕಾಲಿರಿಸಿದ್ದು, ಮೈಕಲ್ ಕೋಲಿನ್ಸ್ ಈಗಲ್ ಎಂಬ ಬಾಹ್ಯಾಕಾಶ ವಾಹನವನ್ನು ನಿಯಂತ್ರಿಸಿದ್ದರು. ಜ್ಯೋತಿಷ್ಯ ಶಾಸ್ತ್ರ, ಬಾಹ್ಯಾಕಾಶ ಸಂಶೋಧನೆಯ ಪ್ರಾಧಾನ್ಯತೆ, ಚಾಂದ್ರಯಾನದ ಮಹತ್ವವನ್ನು ನೆನಪಿಸಲು ಹಾಗೂ ವಿಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಯಿತು. ಹತ್ತನೇ ತರಗತಿಯ ವರ್ಷಾ ಎ.ಬಿ. ಪ್ರಥಮ ಸ್ಥಾನ ಹಾಗೂ ಫಾತಿಮತ್ ಮುಬಶೀರಾ ದ್ವಿತೀಯ ಸ್ಥಾನವನ್ನು ಗಳಿಸಿದರು. ಶಿಕ್ಷಕಿ ನಜುಮುನ್ನೀಸಾ, ಮೇರಿ ವಿರೋನಿ ನೀತು, ಸುಮಿತ್ರಾ ಕೆ.ಎ., ತಂಗಮಣಿ, ಶೈನಾ, ಸಿಬ್ಬಂದಿ ಕಾರ್ಯದರ್ಶಿ ಮೋಹನನ್ ಸಹಕರಿಸಿದರು.