ಉಪ್ಪಳ: ಪೈವಳಿಕೆ ಚಿತ್ತಾರಿಯ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 5ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಸ.1 ಹಾಗೂ 2 ರಂದು ಪೈವಳಿಕೆ ಚಿತ್ತಾರಿ ಚಾವಡಿ ಪರಿಸರದಲ್ಲಿ ನಡೆಯಲಿದೆ.
ಈ ಸಂಬಂಧ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಚಿತ್ತಾರಿ ಶ್ರೀಕ್ಷೇತ್ರ ಪರಿಸರದಲ್ಲಿ ಪೈವಳಿಕೆ ಅರಮನೆಯ ರಂಗತ್ರೈ ಬಲ್ಲಾಳ ಅರಸರು ಬಿಡುಗಡೆಗೊಳಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ತಿರುಮಲೇಶ್ವರ ಭಟ್ ಕುದ್ರೆಕ್ಕೋಡ್ಲು ಅಧ್ಯಕ್ಷತೆ ವಹಿಸಿದ್ದರು. ಗಣೇಶೋತ್ಸವ ಸಮಿತಿ ಪದಾಧಿಕಾರಿಗಳಾದ ಅಜಿತ್ ಎಂ.ಸಿ.ಲಾಲ್‍ಬಾಘ್, ರಾಘವ ಪೈವಳಿಕೆ, ನಾರಾಯಣ ಶೆಟ್ಟಿ ಅಂಬಿಕಾನ, ಮನೋಹರ ಆಚಾರ್ಯ ಪೈವಳಿಕೆ, ಅಶ್ವಥ್ ಪೂಜಾರಿ ಲಾಲ್‍ಬಾಘ್, ಸಚ್ಚಿದಾನಂದ ರೈ ಕಳ್ಳಿಗೆಬೀಡು, ಸುಂದರ ಶೆಟ್ಟಿ ಕಳಾಯಿ, ಸೀತಾರಾಮ ನಾಯ್ಕ್ ಬೋಳಂಗಳ, ಜಯಪ್ರಕಾಶ ಶೆಟ್ಟಿ ಅಂಬಿಕಾನ, ಪ್ರಶಾಂತ್ ಪಾಂಡ್ಯಡ್ಕ ಮೊದಲಾದವರು ಉಪಸ್ಥಿತರಿದ್ದರು. ಶ್ಯಾಮ್ ಭಟ್ ಬೀಡುಬೈಲು ಸ್ವಾಗತಿಸಿ, ಕೇಶವ ಬಾಯಿಕಟ್ಟೆ ವಂದಿಸಿದರು.