ಪೆರ್ಲ:ಪಡ್ರೆ ಗ್ರಾಮದ ವಿವಿಧ ಪ್ರದೇಶಗಳಲ್ಲಿ ಮಳೆ ನೀರು ಇಂಗಿಸುವ, ತೋಡಿಗೆ ಸರಣಿ ತಡೆ ನಿರ್ಮಿಸುವ, ಹರಿದೋಡುವ ಮಳೆ ನೀರನ್ನು ಸುತ್ತಿ ಬಳಸಿ ಹೋಗುವಂತೆ ಹಾಗೂ ಅಲ್ಲಲ್ಲಿ ತಡೆ ನಿರ್ಮಿಸಿ ಇಂಗಿಸುವ, ಆ ಮೂಲಕ ಗ್ರಾಮದ ಅಂತರ್ಜಲ ಮಟ್ಟ ಹೆಚ್ಚಿಸುವ ಪ್ರಯತ್ನ, ಕ್ಷೇತ್ರ ಸಂದರ್ಶನ, ಅಧ್ಯಯನದ ಭಾಗವಾಗಿ 'ನೀರ ನೆಮ್ಮದಿಯತ್ತ ಪಡ್ರೆ' ಜಲಯೋಧರ ತಂಡ ಅಜಿತ್ ಸ್ವರ್ಗ ಅವರ ಎತ್ತರದ ಎರಡು ಗುಡ್ಡೆಗಳ ತಳ ಭಾಗದಲ್ಲಿರುವ ಸಣ್ಣ ಕೆರೆಯನ್ನು ಇತ್ತೀಚೆಗೆ ಸಂದರ್ಶಿಸಿ ಮಾಹಿತಿ ವಿನಿಮಯ ನಡೆಸಲಾಯಿತು.
ಯೋಜನೆಯ ಸಾರಥಿ ಜಲತಜ್ಞ ಶ್ರೀಪಡ್ರೆ, ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ.ವೈ., ಶ್ರೀಹರಿ ಭಟ್ ಸಜಂಗದ್ದೆ, ಜಗದೀಶ್ ಕುತ್ತಾಜೆ, ಶಿವ ಪ್ರಕಾಶ್ ಪಾಲೆಪ್ಪಾಡಿ, ಗಿರೀಶ್ ಬೆಳ್ಳೆಚ್ಚಾಲು, ಕೃಷ್ಣ ಎ.ಜೆ., ಜಗದೀಶ್ಚಂದ್ರ ಕುತ್ತಾಜೆ, ಶ್ರೀಹರಿ ಭರಣೇಕರ್, ರಾಮಚಂದ್ರ ಭಟ್ ಬದಿ ತಂಡದಲ್ಲಿದ್ದರು.