HEALTH TIPS

ಉಮೇಶ ಎಂ.ಸಾಲಿಯಾನ್‍ಗೆ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ


                   
      ಕಾಸರಗೋಡು: ಕರ್ನಾಟಕ ನಾಟಕ ಅಕಾಡೆಮಿಯು ರಂಗಭೂಮಿಯಲ್ಲಿ ಸಾಧನೆ ಮಾಡಿದ ಗಣ್ಯರಿಗೆ ನೀಡುವ 2019-20 ನೇ ಸಾಲಿನ ಪ್ರಶಸ್ತಿಗೆ ಕಾಸರಗೋಡಿನ ನಟ, ನಿರ್ದೇಶಕ, ಸಂಘಟಕ ಉಮೇಶ ಎಂ.ಸಾಲಿಯಾನ್ ಅವರು ಆಯ್ಕೆಯಾಗಿದ್ದಾರೆ.
       ಕಾಸರಗೋಡಿನ ಕನ್ನಡ ಪರ ಸಾಂಸ್ಕøತಿಕ ಹಾಗು ರಂಗಭೂಮಿ ಚಟುವಟಿಕೆಗಳಲ್ಲಿ ನಿರಂತರ 35 ವರ್ಷಗಳಿಂದ ಕ್ರಿಯಾಶೀಲರಾಗಿ ದುಡಿಯುತ್ತಿದ್ದು, ಶಾಲಾ ಕಾಲೇಜುಗಳಲ್ಲಿ ರಂಗ ಚಟುವಟಿಕೆ ಬೆಳೆಸುವಲ್ಲಿ ಗಣನೀಯ ಪಾತ್ರವಹಿಸಿದ್ದರು. ಅಪೂರ್ವ ಕಲಾವಿದರು ತಂಡದಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೊಲ್ಕತ್ತದಲ್ಲಿ ನಡೆದ ಅಂತಾರಾಷ್ಟ್ರೀಯ ಮಕ್ಕಳ ನಾಟಕೋತ್ಸವದಲ್ಲಿ ಕನ್ನಡ ನಾಟಕ ನಿರ್ದೇಶಿಸಿ ಕಾಸರಗೋಡಿನ ಮಕ್ಕಳಿಂದ ನಾಟಕ ಪ್ರದರ್ಶಿಸಿ ಹೊರನಾಡಿನಲ್ಲೂ, ಗಡಿನಾಡಿನಲ್ಲೂ ಅಪೂರ್ವ ಸಾಧನೆ ಮಾಡಿದ್ದು, ಇವುಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
       ಹಿನ್ನೆಲೆ-ಪರಿಚಯ:
      ಶಾಲಾ ಕಾಲೇಜುಗಳಲ್ಲಿ ರಂಗ ಚಟುವಟಿಕೆ ಬೆಳೆಸುವ ಗಣನೀಯ ಪಾತ್ರ ವಹಿಸುತ್ತಿರುವ ಎಂ.ಉಮೇಶ ಸಾಲ್ಯಾನ್ ಬಹುಮುಖದ ಕಾರ್ಯಚಟುವಟಿಕೆ ಉಳ್ಳವರು. ಅಪೂರ್ವ ಕಲಾವಿದರು ತಂಡದಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೋಲ್ಕೊತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಕ್ಕಳ ನಾಟಕೋತ್ಸವದ ಕನ್ನಡ ನಾಟಕ ನಿರ್ದೇಶಿಸಿ ಕಾಸರಗೋಡಿನ ಮಕ್ಕಳಿಂದ ನಾಟಕ ಪ್ರದರ್ಶಿಸಿ ಹೊರನಾಡಿನಲ್ಲೂ ಗಡಿನಾಡಿನಲ್ಲೂ ಅಪೂರ್ವ ಸಾಧನೆ ಮಾಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಲಾರಿ ನಾಟಕದಲ್ಲಿ ಪ್ರಮುಖ ಪಾತ್ರ ವಹಿಸಿ ಕಾಸರಗೋಡು ಪ್ರದೇಶದಲ್ಲಿ ಅಭಿಯಾನ ಮಾಡಿ ಅಪೂರ್ವ ಕಲಾವಿದರ ಯಶಸ್ಸಿಗೆ ಮೈಲುಗಲ್ಲು, ಉತ್ತರ ಕರ್ನಾಟಕ ನೆರೆ ಹಾವಳಿ ಸಂದರ್ಭ ಕಾಸರಗೋಡಿನಿಂದ ಬೆಂಗಳೂರು ತನಕ ಮಳೆ ನಿಂತ ಮೇಲೆ ನಾಟಕ ನಿರ್ದೇಶಿಸಿ, ರಂಗ ಯಾತ್ರೆ ನಡೆಸಿದ ಅದರಿಂದ ಸಂಗ್ರಹವಾದ ಅರ್ಧ ಲಕ್ಷ ಕ್ಕೂ ಹೆಚ್ಚು ದೇಣಿಗೆಯನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ನಿರಂಜನ ಅವರ ಚಿರಸ್ಮರಣೆ ಕಾದಂಬರಿಯನ್ನು ಕನ್ನಡ ಹಾಗೂ ತುಳು ಭಾಷೆಗಳಲ್ಲಿ ನಾಟಕ ರೂಪಾಂತರಿಸಿ ನಿರ್ದೇಶಿಸಿದೆ. ಗಾಂಧಾರಿ, ಮಾರೀಚನ ಬಂಧುಗಳು, ಹಯವದನ, ಬಸ್ತಿ, ದೃಷ್ಟಿ, ಸತ್ಯಮೇವ ಜಯತೇ, ಬಂದ ಬಂದ ಸರದಾರ, ಶಾಂಭಶಿವ ಪ್ರಹಸನ, ಕತ್ಲದಾರಿ ದೂರ, ನಾಯಿಬಾಲ, ರಾಜ್ಯದಾಹ, ಬಾಡೈದ ಇಲ್ಲ್ ಹೀಗೆ ಮುನ್ನೂರಷ್ಟು ಅಧಿಕ ನಾಟಕದಲ್ಲಿ ಅಭಿನಯಿಸಿ ಹಲವು ನಾಟಕಗಳನ್ನು ನಿರ್ದೇಶಿಸಿ ತನ್ನ ಮನೆಯನ್ನೆ? ರಂಗಕುಟೀರವಾಗಿ ಪರಿವರ್ತಿಸಿ ಮಕ್ಕಳಿಗೆ ರಂಗ ತರಬೇತಿ ಶಿಬಿರಗಳನ್ನು ನೀಡಿ ಹೊಸ ತಲೆಮಾರಿನ ಕಲಾವಿದರನ್ನು ಬೆಳೆಸುವಲ್ಲಿ ತೊಡಗಿಸಿದ್ದಾರೆ.
     ಉಡುಪಿ, ದ.ಕ., ಕೊಡಗು, ಕಾಸರಗೋಡು ಜಿಲ್ಲೆಗಳಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ರಂಗಭೂಮಿ ಚಟುವಟಿಕೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಶಾಲಾ ಕಾಲೇಜು ಹವ್ಯಾಸಿ ರಂಗಭೂಮಿಯನ್ನು ಬೆಳೆಸುವುದು ಇವರ ಮುಖ್ಯ ಉದ್ದೆ?ಶ. ಗಡಿನಾಡಿನ ಕಾಸರಗೋಡಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಅಪೂರ್ವ ಕಲಾವಿದರ ಸಹಯೋಗದೊಂದಿಗೆ ಕನ್ನಡ ಚಿಂತನೆ ಕಾರ್ಯಕ್ರಮವನ್ನು ನಡೆಸಿದ್ದಾರೆ. 
     ಪ್ರೊ. ವೇಣುಗೋಪಾಲ್ ಕಾಸರಗೋಡು ರಚಿಸಿದ ಬಂಗಾರಂ ಹಾಗೂ ಶಶಿಧರ ಬಾರಿಘಾಟ್ ಅವರ ನ್ಯಾಯಕ್ಕಾಗಿ ಕಾದಿರುವ ಬಾವ್ರಿ ನಾಟಕವನ್ನು ಕಾಲೇಜು ವಿದ್ಯಾರ್ಥಿಗಳಿಗೆ ನಿರ್ದೇಶಿಸಿ ವಿದ್ಯಾರ್ಥಿಗಳ ಚಿಂತನೆ ಕ್ರಿಯಾ ಸಾಮಾಥ್ರ್ಯಗಳು ಸರಿಯಾದ ದಾರಿಯಲ್ಲಿ ಪ್ರವಹಿಸುವಂತೆ ಮಾಡಿದ್ದಾರೆ. ರಂಗಭೂಮಿಯಲ್ಲಿ ಮಾತ್ರವಲ್ಲದೇ ಚಲನಚಿತ್ರ, ದೂರದರ್ಶನ, ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. 
   ರಂಗಭೂಮಿಯ ಪರಂಪರೆ ಮತ್ತು ಆಧುನಿಕತೆ ಎಂಬ ವಿಚಾರಗೋಷ್ಠಿಯಲ್ಲಿ ಪ್ರಬಂಧ ಮಂಡನೆ ಮಾಡಿದ್ದಾರೆ. ಹಲವು ಪ್ರಶಸ್ತಿ ಪುರಸ್ಕಾರ ಗಳಿಸಿದ್ದಾರೆ. ಕೇರಳ ತುಳು ಅಕಾಡೆಮಿಯ ತೆಂಬರೆ ತ್ರೆ?ಮಾಸಿಕದ ಸಂಪಾದಕರೂ ಕೇರಳ ತುಳು ಅಕಾಡೆಮಿ ಅಧ್ಯಕ್ಷ ರೂ, ಕಲಾವಿದರ ಸಂಘಟನೆಯಾದ ಸವಾಕ್‍ನ ಜಿಲ್ಲಾಧ್ಯಕ್ಷ ರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries