ಬದಿಯಡ್ಕ: ಕುಂಬಳೆ ಫಿರ್ಕಾ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸಭೆ ಬದಿಯಡ್ಕದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಭಾನುವಾರ ನಡೆಯಿತು. ಕುಂಬಳೆ ಫಿರ್ಕಾ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ ಅಧ್ಯಕ್ಷತೆ ವಹಿಸಿದ್ದರು.
ಸಂಘದ ನೇತೃತ್ವದಲ್ಲಿ ಮತ್ತು ಬಂಟರ ಯಾನೆ ನಾಡವರ ಮಾತೃಸಂಘ ಕಾಸರಗೋಡು ತಾಲೂಕು ಸಮಿತಿ ಆಶ್ರಯದಲ್ಲಿ ಆ.10 ರಂದು ಭಾನುವಾರ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಮತ್ತು ಆಟಿದ ಕಂಟ ಕಾರ್ಯಕ್ರಮವನ್ನು ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘದ ಜಿಲ್ಲಾ ಕೋಶಾಧಿಕಾರಿ ಚಂದ್ರಹಾಸ ರೈ ಪೆರಡಾಲ ಗುತ್ತು, ವಿವಿಧ ಪಂಚಾಯತಿ ಘಟಕಗಳ ಅಧ್ಯಕ್ಷರುಗಳಾದ ಮನಮೋಹನ ರೈ ಪಿಂಡಗ, ಸುರೇಶ್ ಕುಮಾರ್ ಶೆಟ್ಟಿ, ಮೋನಪ್ಪ ಆಳ್ವ, ಸಂಜೀವ ರೈ ಪುತ್ತಿಗೆ, ನಿರಂಜನ ರೈ ಪೆರಡಾಲ, ನಾರಾಯಣ ಆಳ್ವ ಎಣ್ಮಕಜೆ, ಹರ್ಷಕುಮಾರ್ ಬೆಳಿಂಜ, ಕೃಷ್ಣಪ್ರಸಾದ್ ರೈ, ಶ್ಯಾಮ ಆಳ್ವ ಕಡಾರು, ಗೋಪಾಲಕೃಷ್ಣ ಶೆಟ್ಟಿ, ಕೊರಗಪ್ಪರೈ, ಜಗನ್ನಾಥ ಶೆಟ್ಟಿ, ಪುಷ್ಪಲತಾ, ಹರೀಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.ಕಾರ್ಯದರ್ಶಿ ಅಶೋಕ ರೈ ಕೊರೆಕ್ಕಾನ ಸ್ವಾಗತಿಸಿ, ಕೋಶಾಧಿಕಾರಿ ಹರಿಪ್ರಸಾದ್ ರೈ ಮಾಯಿಲೆಂಗಿ ವಂದಿಸಿದರು.