HEALTH TIPS

ಉಸಿರು ಕಾಯುವ ಯೋಧರೂ ಹಸಿವು ನೀಗುವ ರೈತರೂ ಸದಾ ಸ್ಮರಣೀಯರು : ವಿಜಯಾಸುಬ್ರಹ್ಮಣ್ಯ


    ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶುಕ್ರವಾರ ಕಾರ್ಗಿಲ್ ಯುದ್ಧದ ಅಮರ ಯೋಧರನ್ನು ಸ್ಮರಿಸುವ ಕಾರ್ಯಕ್ರಮ ಜರಗಿತು. ದೇಶಭಕ್ತಿ ಗೀತೆ, ಕಾರ್ಗಿಲ್ ಯೋಧರ ಸ್ಮರಣಾಂಜಲಿ ಗೀತೆ ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಹೈಸ್ಕೂಲ್ ಮಕ್ಕಳಿಂದ ಮೂಕಾಭಿನಯ ಪ್ರದರ್ಶನ ನಡೆಯಿತು.  ಗ್ರಂಥಪಾಲಿಕೆ ವಿಜಯಾಸುಬ್ರಹ್ಮಣ್ಯ ಈ ಸಂದರ್ಭದಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡಿ ದೇಶವನ್ನು ಕಾಯುತಿಹರು ಗಡಿಗಳಲ್ಲಿ ಯೋಧರು, ನಮಗೆ ಅನ್ನ ನೀಡಲು ಹೊಲಗಳಲ್ಲಿ ರೈತರು ಎಂಬ ಕವಿವಾಣಿ ನೆನೆಯುತ್ತಾ ಯುದ್ಧದಲ್ಲಿ ಮಡಿದ ಅಮರಯೋಧರನ್ನು ಹಾಗೂ ಅನ್ನ ನೀಡುವ ರೈತರನ್ನೂ ನಾವು ಸದಾ ಸ್ಮರಿಸಬೇಕು ಎಂದರು. ಮುಖ್ಯ ಶಿಕ್ಷಕಿ ಚಿತ್ರಾಸರಸ್ವತಿ ಉಪಸ್ಥಿತರಿದ್ದರು. ಶಿಕ್ಷಕ ಹರಿಪ್ರಾದ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries